ಚುನಾವಣೆ ಗೆಲ್ಲಲು ಅನೈತಿಕತೆಯ ಹಾದಿ ಹಿಡಿದ ಬಿಜೆಪಿ: ಮಲ್ಲಿಕಾರ್ಜುನ ಖರ್ಗೆ

Most read

ನವದೆಹಲಿ: ಮತ ಕಳ್ಳತನ ವಿರುದ್ಧ ವಿಪಕ್ಷಗಳು ನಡೆಸುತ್ತಿರುವ ಹೋರಾಟ ಚುನಾವಣೆ ಗೆಲ್ಲಲು ಅಲ್ಲ, ಬದಲಾಗಿ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಹೋರಾಟ ಎಂದು ಕಾಂಗ್ರೆಸ್‌ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ.

ಚುನಾವಣಾ ಆಯೋಗ ಮತದಾನದ ಹಿಂದಿನ ದಿನ ಹೊಸ ಮತದಾರ ಪಟ್ಟಿಯನ್ನು ಬಿಡುಗಡೆ ಮಾಡುವ ‘ಹೊಸ ಟ್ರೆಂಡ್‌’ ಅನ್ನು ಸೃಷ್ಟಿಯಾಗಿದೆ. ಮತದಾನಕ್ಕೆ ಕೆಲವೇ ಗಂಟೆಗಳಿರುವಾಗ ಪಟ್ಟಿ ಪರಿಶೀಲನೆಗೆ ಅಭ್ಯರ್ಥಿಗೆ ಸಮಯವೇ ಇರುವುದಿಲ್ಲ. ಇದು ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಅನೈತಿಕ ಹಾದಿ ಹಿಡಿದಿರುವುದನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.

ನವಂಬರ್‌ ನಲ್ಲಿ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಸುಮಾರು 65 ಲಕ್ಷ ಮತದಾರರ ಹೆಸರನ್ನು ತೆಗೆದು ಹಾಕಿದ್ದರೂ  ಬಿಜೆಪಿ ಚಕಾರ ಎತ್ತಿಲ್ಲ. ಆ ಪಕ್ಷದ ಈ ನಡೆ ಅಚ್ಚರಿ ಮೂಡಿಸುತ್ತದೆ. ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಹೆಸರಿನಲ್ಲಿ ಪ್ರತಿಪಕ್ಷಗಳ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಸಂಚು ರೂಪಿಸಲಾಗಿದೆ. ಇದನ್ನು ಚುನಾವಣಾ ಅಕ್ರಮ ಎನ್ನದೆ ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.

ಚುನಾವಣಾ ಆಯೋಗದ ಯಾರನ್ನು, ಯಾವ ಕಾರಣಕ್ಕಾಗಿ ಮತದಾರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಬಹಿರಂಗಪಡಿಸುತ್ತಿಲ್ಲ. ಬಿಹಾರದಲ್ಲಿ ಜೀವಂತ ಇರುವವರನ್ನೂ ಮೃತಪಟ್ಟಿದ್ದಾರೆ ಎಂದು ದಾಖಲಿಸಲಾಗಿದೆ. ಮತದಾರರ ಧ್ವನಿಯನ್ನು ಸುಪ್ರೀಂ ಕೋರ್ಟ್‌ ಮತದಾರರ ಪಟ್ಟಿಯಿಂದ ಕೈಬಿಟ್ಟವರ ವಿವರ ನೀಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಇದು ಉತ್ತಮ ಬೆಳವಣಿಗೆ ಎಂದರು.

More articles

Latest article