ಹೊಸದಿಲ್ಲಿ: ಗೋಹತ್ಯೆ ಮತ್ತು ತಾವು ಮಾಡಿದ ಗೋಹತ್ಯೆ ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಸಿಲುಕಿಸಲು ಸಂಚು ರೂಪಿಸಿದ ಆರೋಪದಡಿ ಭಜರಂಗದಳದ ನಾಯಕ ಮೋನು ಬಿಶ್ನೋಯ್ ಜೊತೆಗೆ ಇನ್ನಿಬ್ಬರನ್ನು ಪೊಲೀಸರು ನವದೆಹಲಿಯ ಮೊರಾದಾಬಾದಿನ ಕಾಂತ್ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಜನವರಿ 16ರಂದು ಕಾಂತವಾರ ಪಥ ಪ್ರದೇಶದಲ್ಲಿ ಹಸುವಿನ ತಲೆಯೊಂದು ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಎಸ್ಪಿ ಹೆಮರಾಜ ಮೀನಾ ನೇತೃತ್ವದ ತಂಡ ಆರೋಪಿಗಳಾದ ಭಜರಂಗದಳದ ಮುಖ್ಯಸ್ಥ ಮೋನು ಬಿಶ್ನೋಯ್, ರಾಮನ್ ಚೌಧರಿ, ರಾಜೀವ್ ಚೌಧರಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜನವರಿ 29ರಂದು ಚೆತ್ರಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗೋಹತ್ಯೆ ನಡೆಯುತ್ತಿರುವ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿ ಮೆಹಬೂಬ್ ಎನ್ನುವ ವ್ಯಕ್ತಿಯ ಭಾವಚಿತ್ರ ಹಾಗೂ ಮೊಬೈಲ್ ಸಂಖ್ಯೆ ಪತ್ತೆಯಾಗಿದೆ. ಈ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಹೋದ ಪೊಲೀಸರಿಗೆ ಗೋಹತ್ಯೆಯಲ್ಲಿ ಮತ್ತೊಬ್ಬ ಮುಸ್ಲಿಂ ವ್ಯಕ್ತಿ ಶಹಬೂದ್ ನನ್ನು ಸಿಲುಕಿಸುವ ಸಂಚು ಪತ್ತೆಯಾಗಿದೆ. ಸ್ಥಳದಲ್ಲಿ ಪತ್ತೆಯಾದ ಮೆಹಬೂಬ್ ಎಂಬಾತನ ಫೋನ್ ರೆಕಾರ್ಡ್ ಟ್ರಾಪ್ ಮಾಡಿದ ಪೊಲೀಸರು ಮೆಹಬೂಬ್ ನನ್ನು ವಿಚಾರಣೆ ನಡೆಸಿದ್ದಾರೆ. ತನಗೆ ಶಹಬೂದ್ ಮೇಲೆ ದ್ವೇಷವಿದ್ದು ಆತನನ್ನು ಬಂಧಿಸಲು ಭಜರಂಗದಳದ ನಾಯಕನ ಸಹಾಯ ಪಡೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.