ಧರ್ಮಸ್ಥಳದಲ್ಲಿ ಮತ್ತೆ ಹಲವು ಅವಶೇಷಗಳು ಪತ್ತೆ!‌

Most read

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿ SIT ಯೊಂದಿಗೆ ನಡೆಸುತ್ತಿರುವ ಅವಶೇಷಗಳ ಪತ್ತೆ ಕಾರ್ಯದಲ್ಲಿ ಇಂದು ಮಹತ್ವದ ಬೆಳವಣಿಗೆ ಆಗಿದ್ದು ಬಂಗ್ಲೆಗುಡ್ಡೆಯ ಒಂದೇ ಜಾಗದಲ್ಲಿ ಹಲವಾರು ಶವಗಳ ತಲೆಬುರುಡೆ, ಮೂಳೆಗಳು ಪತ್ತೆಯಾಗಿವೆ. ಈ ಸಂಗತಿಯನ್ನು SIT ಮೂಲಗಳೊಂದಿಗೆ ಕನ್ನಡ ಪ್ಲಾನೆಟ್ ದೃಢೀಕರಿಸಿಕೊಂಡಿದೆ.

ಇಂದು ಬೆಳಿಗ್ಗೆಯಿಂದ‌ SIT 11 ನೇ ಪಾಯಿಂಟ್ ನಲ್ಲಿ ಶೋಧನೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಅನಾಮಿಕ ವ್ಯಕ್ತಿ ಮತ್ತೊಂದು ಸ್ಥಳಕ್ಕೆ ಇಡೀ ತಂಡವನ್ನು ಕರೆದೊಯ್ದು ಅಗೆತ ನಡೆಸಿದಾಗ ಒಂದಕ್ಕಿಂತ ಹೆಚ್ಚು ಕಳೆಬರಹಗಳ ಅವಶೇಷಗಳು ಪತ್ತೆಯಾಗಿವೆ.

ಕೂಡಲೇ SIT ಆ ಅವಶೇಷಗಳನ್ನು FSL ತಂಡಕ್ಕೆ ವರ್ಗಾಯಿಸಿದೆ ಎಂದು SIT ಮೂಲಗಳು ತಿಳಿಸಿವೆ.

ಈವರೆಗೆ ತಾನು ಗುರುತಿಸಿದ್ದ 13 ಪಾಯಿಂಟ್ ಗಳಲ್ಲಿ 6 ನೇ ಪಾಯಿಂಟ್ ನಲ್ಲಿ ಮಾತ್ರ ಅವಶೇಷಗಳು ದೊರೆತಿದ್ದವು‌. ಇಂದು ಒಂದೇ ಜಾಗದಲ್ಲಿ ಹಲವು ದೇಹಗಳ ಅವಶೇಷಗಳು ಸಿಕ್ಕಿರುವುದು ಅನಾಮಿಕ ವ್ಯಕ್ತಿಯ ಮಾತುಗಳಿಗೆ ಹೆಚ್ಚಿನ ಬಲ ತಂದಿದೆ. SITಗೂ ಸಹ ಈ ವ್ಯಕ್ತಿಯ ಮೇಲೆ ನಂಬಿಕೆ ಬಂದಿದೆ ಎನ್ನಲಾಗಿದೆ.



More articles

Latest article