ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ; ಹಾಂಗ್‌ ಕಾಂಗ್‌ ನಲ್ಲೇ ಲ್ಯಾಂಡಿಂಗ್‌

Most read

ಮುಂಬೈ: ಹಾಂಗ್‌ ಕಾಂಗ್‌ ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹಾಂಗ್‌ ಕಾಂಗ್ ವಿಮಾನ ನಿಲ್ದಾಣದಲ್ಲೇ ಮತ್ತೆ ಲ್ಯಾಂಡಿಂಗ್ ಆಗಿದೆ ಎಂದು ಏಋ ಇಂಡಿಯಾ ಮೂಲಗಳು ಮಾಹಿತಿ ನೀಡಿವೆ.

ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಬಗ್ಗೆ ಪೈಲಟ್ ಅನುಮಾನ ವ್ಯಕ್ತಪಡಿಸಿದ್ದರು. ಕೂಡಲೇ ವಿಮಾನವನ್ನು ಹಾಂಗ್‌ ಕಾಂಗ್ ವಿಮಾನ ನಿಲ್ದಾಣಕ್ಕೆ ತಿರುಗಿಸಿ ಲ್ಯಾಂಡಿಂಗ್‌ ಮಾಡಲಾಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನವು ಹಾಂಗ್ ಕಾಂಗ್‌ನಿಂದ ಭಾರತೀಯ ಕಾಲಮಾನ ಬೆಳಿಗ್ಗೆ 9.50ಕ್ಕೆ ಹೊರಟು ಮಧ್ಯಾಹ್ನ 12.20ಕ್ಕೆ ದೆಹಲಿಗೆ ಬಂದಿಳಿಯಬೇಕಿತ್ತು. ಇತ್ತೀಚೆಗಷ್ಟೇ ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಲಂಡನ್‌ ಗೆ ಹೊರಟಿದ್ದ ಏಋ ಇಂಡಿಯಾ ವಿಮಾನ ಅಪಘಾತಕ್ಕೀಡದ ಬೆನ್ನಲ್ಲೇ ಈ ಅವಘಡ ಸಂಭವಿಸಿದೆ

More articles

Latest article