ನಾವು ಹಿಂದುಗಳಲ್ಲ, ವೈದಿಕರಲ್ಲ ನಮ್ಮದು ಸ್ವತಂತ್ರ್ಯ ಧರ್ಮ : ಎಸ್. ಎಂ. ಜಾಮ್ದಾರ್

Most read

ಬೆಂಗಳೂರು: ನಾವು ಹಿಂದುಗಳಲ್ಲ, ವೈದಿಕರಲ್ಲ ನಮ್ಮದು ಸ್ವತಂತ್ರ್ಯ ಧರ್ಮ, ನಮ್ಮ ಸಮಾಜ ಪ್ರತ್ಯೇಕ, ನಮ್ಮನ್ನೂ ಅಲ್ಪಸಂಖ್ಯಾರೆಂದು ಪರಿಗಣಿಸಿ, ಸಂವಿಧಾನದಲ್ಲಿ ಕಲ್ಪಿಸಿರುವ ಧಾರ್ಮಿಕ ಮೂಲಭೂತ ಹಕ್ಕನ್ನು ಗೌರವಿಸಿ. ಇನ್ನೂ ಶತಮಾನಗಳುರುಳಿದರೂ ಈ ಸ್ವತಂತ್ರ್ಯ ಧರ್ಮದ ಹೋರಾಟವಿರುತ್ತದೆ ಎಂದು ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಗಳಾದ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಸ್. ಎಂ. ಜಾಮ್ದಾರ್ ಹೇಳಿದರು.

ನಗರದ ಮಹಾದೇವ ದೇಸಾಯಿ ಸಭಾಂಗಣ, ಗಾಂಧಿಭವನದಲ್ಲಿ ನಡೆದ, ಲೇಖಕ ಜಿ. ಬಿ ಪಾಟೀಲ್ ಅವರ ʼಲಿಂಗಾಯತ ಚಳುವಳಿ 2017-18ʼ ಪುಸ್ತಕವನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, “ಸುಮಾರು 150 ವರ್ಷಗಳ ವ್ಯಾಪ್ತಿ ಪಡೆದ ಲಿಂಗಾಯತ ಧರ್ಮ ಚಳುವಳಿಯು 1947 ರ ತದನಂತರದಲ್ಲಿಯೂ ಇದ್ದ ಹೋರಾಟದ ವ್ಯಾಪಕತೆಯಿಂದ ಮೊದಲುಗೊಂಡು 2017-2018 ರಲ್ಲಿ ಮುಂದಣಕ್ಕೆ ಚಳುವಳಿ ಬಹುದೊಡ್ಡ ಸ್ವರೂಪ ಪಡೆದು, ಈ ವೇಳೆ ನಡೆದ ಪರ-ವಿರೋಧಗಳ ಚಿತ್ರಣವನ್ನು ದಾಖಲಿಸಿದ ಗ್ರಂಥವಿದಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಉದ್ದೇಶಿಸಿ, ಪ್ರಾಸ್ತವಿಕ ನುಡಿಗಳನ್ನಾಡಿದ ಅವರು, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಡಿದ ಹಿನ್ನಲೆಯನ್ನು ಕುರಿತು ಪರಿಚಯಿಸಿದರು. “ಈ ಪುಸ್ತಕವು ಮಹತ್ವದ ಐತಿಹಾಸಿಕ ದಾಖಲೆಗಳನ್ನು ಒಳಗೊಂಡಿದೆ. 1889 ರಲ್ಲಿ ಆರಂಭಗೊಂಡು, ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ನಡೆದ ಮೊದಲ ಜನಗಣತಿಯಲ್ಲಿ ಇದ್ದ ಅಸಮಾನತೆ, ಹಿಂದೂ ಧರ್ಮ ಚಾತುವರ್ಣ ವ್ಯವಸ್ಥೆಯಲ್ಲಿ ಸಿ. ರಂಗಾಚಾರ್ಯರು ಲಿಂಗಾಯತ ಧರ್ಮದವರನ್ನು ಶೂದ್ರರೆಂದು ಸೇರ್ಪಡಿಸಿದ್ದರು” ಎಂದರು.

“ಇಂದಿಗೂ ಇರುವ ಪ್ರತಿರೋಧದ ನಡುವೆ ಚಳುವಳಿಯು ಸಾಗಿಬಂದ ಹಾದಿಯನ್ನು ಇಲ್ಲಿ ಕಲೆಹಾಕಿರುವುದಕ್ಕೆ ಸರ್ಕಾರಿ ಆದೇಶಗಳು, ಆಧಾರನ್ನೊಳಗೊಂಡಿವೆ. ನಾವು ಆಶಾವಾದಿಗಳು, ನನ್ನನ್ನು ಒಳಗೊಂಡಂತೆ ಕೇವಲ 8 ಜನರಿಂದ ಶುರುವಾದ ಈ ಸಂಘಟನೆಯು ಇದೀಗ ರಾಜಕೀಯವಾಗೂ ಯಶಸ್ವಿಯಾಗಿದ್ದೇವೆ. ಸಮುದಾಯದ ಅಸ್ಥಿತ್ವಕ್ಕೆ ಚಳುವಳಿ ಸಾಕ್ಷಿಯಾದ, ಅದರ ಪ್ರಯತ್ನ, ವ್ಯಥೆ ಹಾಗೂ ಸಪೂರ ಸಂದರ್ಭಗಳನ್ನು ಈ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ” ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನ ದಾಸ್, ಸಾಣೇಹಳ್ಳಿ ಶಾಖಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಶಾಸಕರಾದ ಬಿ.ಆರ್. ಪಾಟೀಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ, ಪ್ರಾಧ್ಯಪಕರಾದ ಪ್ರಶಾಂತ ನಾಯಕ, ಪುಸ್ತಕದ ಲೇಖಕರಾದ ಜಿ.ಬಿ.ಪಾಟೀಲರು ಉಪಸ್ಥತರಿದ್ದರು.

More articles

Latest article