ಜನಗಣತಿಯೊಂದಿಗೆ ಜಾತಿ ಗಣತಿ:  ಕಾಂಗ್ರೆಸ್‌ ಬೇಡಿಕೆಗೆ ಮಣಿದ ಕೇಂದ್ರ ಸರ್ಕಾರ

Most read

ನವದೆಹಲಿ: ಕೇಂದ್ರ ಸರ್ಕಾರ ಕೈಗೊಳ್ಳಲಿರುವ ಜನಗಣತಿಯಲ್ಲಿ ಜಾತಿ ಗಣತಿಯನ್ನೂ ಒಳಗೊಳ್ಳುವ ನಿರ್ಧಾರವು ಕಾಂಗ್ರೆಸ್‌ ಸ್ವಾಗತಿಸಿದೆ. ಜನಗಣತಿ ಜತೆಗೆ ಜಾತಿಗಣತಿಯನ್ನೂ ನಡೆಸುವಂತೆ ಕಾಂಗ್ರೆಸ್‌ ಸುದೀರ್ಘ ಅವಧಿಯಿಂದ ಒತ್ತಾಯಿಸುತ್ತಿತ್ತು ಇಂತಹ ಪ್ರಮುಖ ಬೇಡಿಕೆಯನ್ನು ಕೈಬಿಡುವುದಕ್ಕಿಂತ, ತಡವಾದರೂ ಕೈಗೆತ್ತಿಕೊಂಡಿದ್ದೇ ಉತ್ತಮ ನಿರ್ಧಾರ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.

ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, ಸಾಮಾಜಿಕ ನ್ಯಾಯದಡಿ ಜಾತಿ ಗಣತಿ ನಡೆಸಬೇಕು ಎಂಬ ಒತ್ತಾಯವನ್ನು ಪಕ್ಷ ಮಾಡುತ್ತಲೇ ಬಂದಿತ್ತು. ಏ. 9ರಂದು ಅಹಮದಾಬಾದ್‌ ನಲ್ಲಿ ಪಕ್ಷ ಕೈಗೊಂಡ ಸಮಾವೇಶದಲ್ಲೂ ಈ ಕುರಿತು ಹಕ್ಕೊತ್ತಾಯ ಮಂಡಿಸಲಾಗಿತ್ತು ಎಂದು ಹೇಳಿದ್ದಾರೆ.

ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸುತ್ತಲೇ ಬಂದಿತ್ತು. ಬಿಹಾರ, ತೆಲಂಗಾಣ ಮತ್ತು ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿತ್ತು. 

ಏ. 16ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ವಿಳಂಬವಾಗಿರುವ ಜನಗಣತಿಯನ್ನು ಶೀಘ್ರದಲ್ಲಿ ನಡೆಸುವಂತೆ ಹಾಗೂ ಅದರೊಳಗೆ ಜಾತಿ ಗಣತಿಯನ್ನು ಅಳವಡಿಸಬೇಕು ಎಂದು ಆಗ್ರಹಿಸಿದ್ದರು.

2006ರ ಜ. 20ರಂದು ಕಾಂಗ್ರೆಸ್ ಸರ್ಕಾರವು ಆರ್ಟಿಕಲ್ 15 (5) ಅಡಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಯ ಅಭ್ಯರ್ಥಿಗಳಿಗೆ ತಡಮಾಡದೆ ಮೀಸಲಾತಿ ನೀಡಬೇಕು. ಸಾಂವಿಧಾನಿಕವಾಗಿ ಖಾತ್ರಿಪಡಿಸಲಾದ ಸಾಮಾಜಿಕ ನ್ಯಾಯವನ್ನು ರಾಷ್ಟ್ರವ್ಯಾಪಿ ಜಾತಿ ಗಣತಿ ಮೂಲಕವೇ ಬಲಪಡಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.

More articles

Latest article