ಕೋಲ್ಕತ್ತಾ ಹೋಟೆಲ್ ನಲ್ಲಿ ಬೆಂಕಿ ಅವಘಡ: 14 ಮಂದಿ ಸಾವು : ತನಿಖೆಗೆ SIT ರಚನೆ

Most read

ಕೋಲ್ಕತ್ತಾ: ನಗರದ ಬುರ್ರಬಜಾರ್‌ನ ಜನದಟ್ಟಣೆ ಇರುವಂತ ಪ್ರದೇಶದ ಮೆಚುಆಪಟ್ಟಿಯಲ್ಲಿನ ಚಿಕ್ಕ ಹೋಟೆಲೊಂದರಲ್ಲಿ ಸಂಭವಿಸಿದ ಭಾರಿ ಬೆಂಕಿ ಅನಾಹುತಾದಲ್ಲಿ ಒಬ್ಬ ಮಹಿಳೆ, ಇಬ್ಬರು ಮಕ್ಕಳು ಸೇರಿದಂತೆ 14 ಜನರು ಸಾವನ್ನಪ್ಪಿದ್ದಾರೆ.

ಮೃತಪಟ್ಟಿರುವರಲ್ಲಿ  ಹೆಚ್ಚಿನವರು ಬೆಂಕಿಯಿಂದ ಸಂಭವಿಸಿದ ಹೊಗೆಯ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಮತ್ತು ಬೆಂಕಿಯಲ್ಲಿ 13 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆ ನಡೆದ ಸ್ಥಳಕ್ಕೆ ಬಂದ ಪೊಲೀಸರು ಮಾಧ್ಯಮದವರಿಗೆ ಮಾಹಿತಿಯನ್ನು ನೀಡಿದ್ದಾರೆ.

ಕೋಲ್ಕತ್ತಾ ನಗರದ ಪೊಲೀಸ್ ಆಯುಕ್ತ ಮನೋಜ್ ವರ್ಮಾ ಆರಂಭದಲ್ಲಿ 15 ಜನ  ಸಾವನಪ್ಪಿರುವುದಾಗಿ  ಹೇಳಿದ್ದರು. ನಂತರ ಆಸ್ಪತ್ರೆಗಳು ಮತ್ತು ರಕ್ಷಣಾ ದಾಖಲೆಗಳನ್ನು ಪರಿಶೀಲಿಸಿದ ಮೇಲೆ ಸಾವಿನ  ಸಂಖ್ಯೆಯು 14 ಎಂದು ಖಚಿತಪಡಿಸಿದರು.

ಘಟನೆಯ ಸ್ಥಳಕ್ಕೆ ಬಂದ ಹತ್ತು ಅಗ್ನಿಶಾಮಕ ವಾಹನಗಳು ನಡೆಸಿದ ಸುಮಾರು 10 ಗಂಟೆಗಳ ಕಾರ್ಯಚರಣೆಯ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಈ ಕುರಿತು ಬುಧವಾರ ಬೆಳಿಗ್ಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬೆಂಕಿ ಅನಾಹುತಾದಲ್ಲಿ ಸಾವಿಗೆ ಈಡಾಗಿರುವವರಿಗೆ  ಪ್ರಧಾನಿಯವರು ಪರಿಹಾರವನ್ನು  ಘೋಷಿಸಿದ್ದಾರೆ. ಜೊತೆಗೆ ಈ ಘಟನೆಯ ಕುರಿತು ತನಿಖೆಗಾಗಿ ಎಸ್‌ಐಟಿಯನ್ನು ರಚಿಸಲಾಗಿದೆ

More articles

Latest article