ಭಾರತ್ ಜೋಡೋ ನ್ಯಾಯ ಯಾತ್ರೆ‌ | 13 ನೇ ದಿನ

Most read

“ದೇಶದಲ್ಲಿ ಧರ್ಮದ ಧರ್ಮದ ನಡುವೆ, ಭಾಷೆ ಭಾಷೆಯ ನಡುವೆ, ಪ್ರದೇಶ ಪ್ರದೇಶದ ನಡುವೆ ಜಗಳ ಮಾಡಿಸಲಾಗುತ್ತಿದೆ. ಇದರಿಂದ ದೇಶಕ್ಕೆ ಏನಾದರೂ ಪ್ರಯೋಜನ ಇದೆಯೋ ಎಂದು ನೀವು ಯೋಚಿಸಿ. ಇದರ ವಿರುದ್ಧ ನೀವೆಲ್ಲ ಹೋರಾಡಬೇಕು” – ರಾಹುಲ್‌ ಗಾಂಧಿ

ಎರಡು ದಿನಗಳ ವಿರಾಮದ ಬಳಿಕ ಇಂದು (28.01.2024) ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ನ್ಯಾಯ ಯಾತ್ರೆ ಮತ್ತೆ ಶುರುವಾಗಿದೆ.


ಇಂದು ಮಧ‍್ಯಾಹ್ನ 2 ಗಂಟೆಗೆ ಯಾತ್ರೆ ಪಶ್ಚಿಮ ಬಂಗಾಲದ ಜಲಪಾಯ್ ಗುರಿಯಿಂದ ಆರಂಭವಾಯಿತು. ಸಿಲಿಗುರಿಯ ಥಾನಾ ಮೋರ್ ನಿಂದ ಏರ್ ವ್ಯೂ ಮೋರ್ ವರೆಗೆ ಮಧ್ಯಾಹ್ನ 4.45 ಕ್ಕೆ ಪಾದಯಾತ್ರೆ ನಡೆಯಿತು. ಬಳಿಕ ಸಾರ್ವಜನಿಕ ಸಭೆ ನಡೆಯಿತು. ಎಂದಿನಂತೆ ಭಾರೀ ಸಂಖ್ಯೆಯಲ್ಲಿ ಜನ ರಾಹುಲ್ ತಂಡವನ್ನು ಸ್ವಾಗತಿಸಿದರು. ರಾತ್ರಿ ಉತ್ತರ ದಿನಾಜ್ ಪುರದ ಸೋನಾಪುರದಲ್ಲಿ ಯಾತ್ರಾರ್ಥಿಗಳು ತಂಗಲಿದ್ದಾರೆ.


ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ದೇಶದಲ್ಲಿ ಧರ್ಮದ ಧರ್ಮದ ನಡುವೆ, ಭಾಷೆ ಭಾಷೆಯ ನಡುವೆ, ಪ್ರದೇಶ ಪ್ರದೇಶದ ನಡುವೆ ಜಗಳ ಮಾಡಿಸಲಾಗುತ್ತಿದೆ. ಇದರಿಂದ ದೇಶಕ್ಕೆ ಏನಾದರೂ ಪ್ರಯೋಜನ ಇದೆಯೋ ಎಂದು ನೀವು ಯೋಚಿಸಿ. ಇದರ ವಿರುದ್ಧ ನೀವೆಲ್ಲ ಹೋರಾಡಬೇಕು. ದೇಶದಲ್ಲಿ ಈ ದ್ವೇಷಕ್ಕೆ ಏನು ಕಾರಣ? ಯುವಕರು ಶಾಲೆ ಓದಿ ಏನು ಮಾಡಬಯಸುತ್ತಾರೆ? ಅವರಿಗೆ ಉದ್ಯೋಗ ಬೇಕು. ಆದರೆ ಉದ್ಯೋಗ ಸಿಗುತ್ತಿಲ್ಲ. ಹಾಗಾಗಿ ಅವರಲ್ಲಿ ಸಿಟ್ಟು ಇದೆ. ನಿರಾಶೆ ಇದೆ. ಅಗ್ನಿವೀರ ಯೋಜನೆಯಿಂದಾಗಿ ಉದ್ಯೋಗಾಕಾಕ್ಷಿ ಯುವಕರಿಗೆ ಅನ್ಯಾಯವಾಗಿದೆ. ಸೇನೆಯಲ್ಲಿ ಕೆಲಸ ಮಾಡುವವರಿಗೆ ನಿವೃತ್ತಿ ನಂತರದ ಅರ್ಥಿಕ ಭದ್ರತೆ ಇಲ್ಲವಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಭಯಾನಕವಾಗಿದೆ. ಆದರೆ ಮೋದಿ ಸರಕಾರಕ್ಕೆ ಜನರ ಉದ್ಯೋಗದ ಬಗ್ಗೆ ಚಿಂತೆ ಇಲ್ಲ. ನೀವು ಬಂಗಾಳಿಗಳು ಬುದ್ಧಿವಂತರು. ಬ್ರಿಟಿಷರ ವಿರುದ್ಧ ಸೈದ್ಧಾಂತಿಕ ಹೋರಾಟ ಮಾಡಿದವರು. ರವೀಂದ್ರ ನಾಥ ಟಾಗೋರ್, ವಿವೇಕಾನಂದ, ನೇತಾಜಿ ಮಾಡಿದ ಕೆಲಸ ನಿಮಗೆ ಗೊತ್ತೇ ಇದೆ. ಈಗ ದೇಶಕ್ಕೆ ದಾರಿ ತೋರಿಸುವಲ್ಲಿಯೂ ನಿಮಗೆ ದೊಡ್ಡ ಪಾತ್ರವಿದೆ” ಎಂದರು.

ಶ್ರೀನಿವಾಸ ಕಾರ್ಕಳ

ಮಂಗಳೂರು

More articles

Latest article