ʻಅಂಬೇಡ್ಕರ್ ಸಂವಿಧಾನ ಬದಲಾಗಬೇಕುʼ ಹೀಗೊಂದು ಸಿನಿಮಾ ತಯಾರಾಗುತ್ತಿದೆಯೇ? ಚಿತ್ರದ ಟೀಜರ್ ಗೆ ಸಿಂಪಲ್ ಸುನಿ ಲೈಕ್ ಒತ್ತಿದ್ದೇಕೆ?

Most read

ಕನ್ನಡದಲ್ಲಿ ASB ಎಂಬ ವಿಚಿತ್ರ ಹೆಸರಿನಲ್ಲಿ ಸಿನಿಮಾ ಒಂದು ತಯಾರಾಗುತ್ತಿದೆಯೇ? ಸಿನಿಮಾ ಟೀಜರ್ ಪ್ರಕಾರ ASB ಎಂದರೆ ಅಂಬೇಡ್ಕರ್ ಸಂವಿಧಾನ ಬದಲಾಗಬೇಕು! ಇಂಥ ಟೈಟಲ್ ಇಡುವ ದುಸ್ಸಾಹಸ ಯಾರು ಮಾಡಿರಬಹುದು, ಭಾರತ ಸಂವಿಧಾನದ ವಿರುದ್ಧವೇ ಸಿನಿಮಾ ಮಾಡುವ ದಾಷ್ಟ್ಯ ಯಾರಿಗಿರಬಹುದು ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು.

ನಿಜ, ಕನ್ನಡ ಕ್ರಿಯೇಟರ್ಸ್ ಅಡ್ಡ ಎಂಬ ಹೆಸರಿನ ಇನ್ಸ್ಟಾ ಗ್ರಾಂ ಹ್ಯಾಂಡಲ್ ನಲ್ಲಿ ASB ಎಂಬ ಹೆಸರಿನ ಸಿನಿಮಾದ ಟೀಜರ್ ಪೋಸ್ಟ್ ಮಾಡಲಾಗಿದೆ. ಇದು ನಿಜಕ್ಕೂ ಸಿನಿಮಾದ ಟೀಜರ್ ಇರಬಹುದಾ ಅಥವಾ ಬೇರೆ ಸಿನಿಮಾಗಳಿಂದ ಕದ್ದ ತುಣುಕುಗಳನ್ನು ಟೀಜರ್ ರೂಪಕ್ಕೆ ಇಳಿಸಲಾಗಿದೆಯಾ ಎಂಬುದನ್ನು ಇನ್ನೂ ಪರಿಶೀಲಿಸಬೇಕಾಗಿರುತ್ತದೆ.

ಈ ಸಿನಿಮಾದ ಟೀಜರ್ ನಲ್ಲಿ ಚಿತ್ರದ ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರು ತಮ್ಮ ಹೆಸರುಗಳನ್ನು ಹಾಕಿಕೊಳ್ಳುವ ಧೈರ್ಯ ಪ್ರದರ್ಶಿಸಿಲ್ಲ. ಇನಿಷಿಯಲ್ಸ್ ಗಳನ್ನು ಮಾತ್ರ ಹಾಕಲಾಗಿದೆ. ಸಿನಿಮಾದ ಪ್ರೊಡಕ್ಷನ್ ಹೌಸ್ ಸಾರದಾ ಮೂವಿ ಮೇಕರ್ಸ್ ಎಂದು ತೋರಿಸಲಾಗಿದೆ. ಸಾರದಾ ಮೂವಿ ಮೇಕರ್ಸ್ ಎಂಬ ಹೆಸರಿನ ಹ್ಯಾಂಡಲ್ ನಲ್ಲೂ ASB ಚಿತ್ರದ ಒಂದೇ ಟೀಜರನ್ನು ಹಲವು ಬಾರಿ ಪೋಸ್ಟ್ ಮಾಡಲಾಗಿದೆ. ಜೊತೆಗೆ ಸಾರದಾ ಮೂವಿ ಮೇಕರ್ಸ್ ಕ್ಲಾಪ್ ಬೋರ್ಡ್ ನ ಚಿತ್ರವನ್ನೂ ಪೋಸ್ಟ್ ಮಾಡಲಾಗಿದೆ. ಈ ಕ್ಲಾಪ್ ಬೋರ್ಡ್ ತೆಲುಗು ಭಾಷೆಯಲ್ಲಿರುವುದು ಒಂದು ವಿಶೇಷ,

ಕನ್ನಡ ಕ್ರಿಯೇಟರ್ಸ್ ಅಡ್ಡ ಪೋಸ್ಟ್ ಮಾಡಿರುವ ಟೀಜರ್ ಗೆ 982 ಮಂದಿ ಲೈಕ್ ಮಾಡಿದ್ದು, ಅದರಲ್ಲಿ ಕನ್ನಡದ ಚಿತ್ರ ನಿರ್ದೇಶಕ ಸಿಂಪಲ್ ಸುನಿ ಕೂಡ ಒಬ್ಬರು. ಈ ಸಿನಿಮಾದ ಟೈಟಲ್ಲೇ ದೇಶವಿರೋಧಿಯಾಗಿದ್ದರೂ ಅವರು ಲೈಕ್ ಮಾಡಿದ್ದೇಕೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ನಿಮ್ಮ ಒರಿಜಿನಲ್ ಹೆಸರು ಹಾಕಿಕೊಳ್ಳದೆ ಟೀಜರ್ ಮಾಡಿದ್ದೀರಲ್ಲ? ಯಾಕೆ ಧೈರ್ಯ ಇಲ್ಲವೇ ಎಂದು ಕೆಲವು ಈ ಪೋಸ್ಟ್ ನಲ್ಲಿ ಕಮೆಂಟ್ ಮಾಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಟಚ್ ಮಾಡುವ ಶಕ್ತಿ ಯಾರಿಗೂ ಇಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ಟೀಜರ್ ಹಿಂದಿರುವ ವ್ಯಕ್ತಿಗಳ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕು ಎಂದು ಸಹ ಕಮೆಂಟ್ ಮಾಡಲಾಗಿದೆ.

https://www.instagram.com/p/C2kBnzRv-R7/

More articles

Latest article