ಕಲಬುರಗಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶೇ.51ಹಾಗೂ ಶೇ.49 ರ ಜಂಟಿ ಸಹಭಾಗಿತ್ವದಲ್ಲಿ 1000 ಎಕರೆಜಾಗದಲ್ಲಿ, ಜವಳಿ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿದೆ. ಈಸಂಬಂಧ ವಿವಿಧ ಮೂಲಭೂತ ಕಾಮಗಾರಿಗಳಿಗೆ ರೂ.390ಕೋಟಿ ಅನುದಾನವನ್ನು ನೀಡಲು ಸಚಿವ ಸಂಪುಟವುಅನುಮೋದನೆ ನೀಡಿದೆ. ಇದರಿಂದಾಗಿ 1 ಲಕ್ಷ ನೇರಉದ್ಯೋಗಗಳು ಸೃಜನೆಯಾಗಬಹುದೆಂದು ಅಂದಾಜಿಸಲಾಗಿದೆ. ನೇಕಾರ ಸಮ್ಮಾನ್ ಯೋಜನೆಯಡಿ 2024-25ನೇ ಸಾಲಿಗೆ 1,16,189 ಕೈಮಗ್ಗ ಮತ್ತು ವಿದ್ಯುತ್ ಮಗ ನೇಕಾರರಿಗೆ ಒಟ್ಟು ರೂ.81 ಕೋಟಿಗಳ ಅನುದಾನ ಹಂಚಿಕೆ ಮಾಡಲಾಗಿದ್ದು, ನೇರನಗದು ವರ್ಗಾವಣೆ ಮುಖಾಂತರ ಬಿಡುಗಡೆ ಮಾಡುತ್ತಿದೆ.
ರಾಜ್ಯದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ದೃಷ್ಟಿಯಿಂದ ವಿಜಯಪುರ ಜಿಲ್ಲೆಯಲ್ಲಿ ರೂ.347 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಇದೇ ಸಾಲಿನಲ್ಲಿ ಮುಕ್ತಾಯಗೊಳಿಸಿ ಪ್ರಯಾಣಿಕರಿಗೆ ಸಜ್ಜುಗೊಳಿಸಲಾಗುತ್ತಿದೆ. ಮೈಸೂರು ವಿಮಾನ ನಿಲ್ದಾಣವನ್ನು ವಿಸ್ತರಣೆಯನ್ನು ರೂ.319 ಕೋಟಿ ವೆಚ್ಚದಲ್ಲಿ, ರಾಯಚೂರು ವಿಮಾನ ನಿಲ್ದಾಣವನ್ನು ರೂ.219 ಕೋಟಿ ವೆಚ್ಚದಲ್ಲಿಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿದೆ.
ರಾಜ್ಯದ ಧರ್ಮಸ್ಥಳ, ಮಡಿಕೇರಿ ಮತ್ತು ಚಿಕ್ಕಮಗಳೂರಿನಲ್ಲಿ ಏರ್ಸ್ಟ್ರಿಪ್ಗಳನ್ನು ಅಭಿವೃದ್ಧಿಪಡಿಸಲು ಭೂಮಿಯನ್ನು ಗುರುತಿಸುವ ಮತ್ತು ಭೂಸ್ವಾಧೀನ ಪ್ರಕ್ರಿಯೆ ನಡೆಸುವ ಕೆಲಸ ಮಾಡುತ್ತಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 407 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಬೆಂಗಳೂರು ಸಿ ಚ ಬ್ಯುಸಿನೆಸ್ ಪಾರ್ಕನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ. ಕಾರವಾರ ನೌಕಾನೆಲೆ ಬಳಿಯ ವಿಮಾನ ನಿಲ್ದಾಣದ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.
ರಾಜ್ಯದ 9 ರೈಲ್ವೆ ಯೋಜನೆಗಳಿಗಾಗಿ ನನ್ನ ಸರ್ಕಾರವು 600 ಕೋಟಿ ರೂ. ಗಳನ್ನು ಪ್ರಸ್ತುತ ಸಾಲಿನಲ್ಲಿ ಒದಗಿಸಿದೆ. ಈ ಯೋಜನೆಗಳಿಗೆ ಕಾಮಗಾರಿ ವೆಚ್ಚದ ಶೇ.50 ರಷ್ಟು ಮತ್ತು ಭೂಸ್ವಾಧೀನ ವೆಚ್ಚದಲ್ಲಿ ಶೇ.50 ರಿಂದ ಶೇ.100 ರಷ್ಯನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ರಾಜ್ಯದಲ್ಲಿನ 66 ಕಿ.ಮೀ. ರೈಲ್ವೆ ದ್ವಿಪಥ ಯೋಜನೆಗಾಗಿ 407 ಕೋಟಿ ರೂ.ಗಳನ್ನು ನನ್ನ ಸರ್ಕಾರವೇ ಒದಗಿಸುತ್ತಿದೆ. ಈ ದ್ವಿಪಥ ರೈಲ್ವೆ ಯೋಜನೆಗಳು 2025ರ ಆಗಸ್ಟ್ ವೇಳೆಗೆ ಸಂಪೂರ್ಣಗೊಳ್ಳಲಿವೆ. ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆಗಳ ಸಹಭಾಗಿತ್ವದಲ್ಲಿ 148.17 ಕಿ.ಮೀ ಉದ್ದದ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಜಾಲವನ್ನು ರೂ.15,767 ಕೋಟಿಗಳ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ.ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡು ಸಾಧ್ಯವಿರುವ ಎಲ್ಲ ಉಪಕ್ರಮಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ.
Center of Excellence in Wired and Wireless Technology ಅನ್ನು 5 ವರ್ಷಗಳ ಅವಧಿಗೆ ರೂ.25 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಸ್ಥಾಪಿಸಲಾಗುತ್ತಿದೆ. ಮೈಸೂರಿನ ಮಂಡಕಳ್ಳಿಯಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ರೂ.30 ಕೋಟಿಗಳ12 32. 33. ವೆಚ್ಚದಲ್ಲಿ “ಜಾಗತಿಕ ತಂತ್ರಜ್ಞಾನ ಕೇಂದ್ರ” (Global TechnologyCenter) ವನ್ನು ಸ್ಥಾಪಿಸಲು ಕ್ರಮ ಕೈಗೊಂಡಿದೆ. ಮಹಿಳಾ ನೇತೃತ್ವದ ಸ್ಮಾರ್ಟ್ ಅಪ್ಗಳನ್ನು ಪ್ರೋತ್ಸಾಹಿಸಲುವಿಶೇಷವಾಗಿ Incubation ಮತ್ತು Acceleration ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು WEscalateಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಕಾರ್ಯಕ್ರಮವು ಉತ್ಪನ್ನಗಳ ಮಾನ್ಯಗೊಳಿಸುವಿಕೆ,ಮಾರುಕಟ್ಟೆಗೆ ಪ್ರವೇಶ ಮತ್ತು ಕಾರ್ಯಚಟುವಟಿಕೆಗಳನ್ನುವಿಸ್ತರಿಸಲು ಅವಶ್ಯಕ ಸಾಧನಗಳು, ಮಾರ್ಗದರ್ಶನ ಮತ್ತುMentorship ಸೌಲಭ್ಯವನ್ನು ಒದಗಿಸುತ್ತದೆ.