ಕೆಎಂಎಫ್‌ ಮುಷ್ಕರ ಇಲ್ಲ; ಹಾಲು, ಮೊಸರು ಪೂರೈಕೆಗೆ ಅಡ್ಡಿ ಇಲ್ಲ

Most read

ಬೆಂಗಳೂರು: ಬಾಕಿ ವೇತನ ಬಿಡುಗಡೆ, 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಪರಿಷ್ಕೃತ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ  ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನೌಕರರು ನಾಳೆಯಿಂದ ಮುಷ್ಕರ ಆರಂಭಿಸಲು ನಿರ್ಧರಿಸಿದ್ದಾರೆ. ಆದರೆ ಫೆಬ್ರವರಿ 1 ರಿಂದ ನಂದಿನಿ ಹಾಲು, ಮೊಸರು, ಉತ್ಪನ್ನಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸಿ ಸಮಸ್ಯೆ ಇತ್ಯರ್ಥ ಪಡಿಸುತ್ತಾರೆ. ಹಾಗಾಗಿ ಫೆಬ್ರವರಿ 1ರಿಂದ ಯಾವುದೇ ಮುಷ್ಕರ ಇರುವುದಿಲ್ಲ ಎಂದು  ಕೆಎಂಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

7ನೇ ವೇತನ ಆಯೋಗದ ಶಿಫಾರಸಿನಂತೆ ಬಾಕಿ ಉಳಿದಿರುವ ವೇತನ ಶೀಘ್ರವೇ ಮಂಜೂರು ಮಾಡಬೇಕು. 7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರನ ಶೇ. 25 ರ ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಈ ಪೈಕಿ ಶೇ 17 ರಷ್ಟು ಮಾತ್ರ ಹೆಚ್ಚಳ ಮಾಡಿದೆ. ಉಳಿದ ಶೇ. 8 ರಷ್ಟು ವೇತನ ಹೆಚ್ಚಳ ಹಾಗೂ ಬಿಡುಗಡೆ ಬಾಕಿ ಇದೆ. ಅದನ್ನೂ ನೀಡಬೇಕು ಎಂದು ಕೆಎಂಎಫ್‌ ನೌಕರರ ಸಂಘದ ಅಧ್ಯಕ್ಷ ಗೋವಿಂದಗೌಡ ಹೇಳಿದ್ದಾರೆ. KMFನಲ್ಲಿ ಪ್ರಸ್ತುತ  7,000 ಉದ್ಯೋಗಿಗಳಿದ್ದಾರೆ. ಅವರಲ್ಲಿ 1,400 ಉನ್ನತ ದರ್ಜೆಯ ಸಿಬ್ಬಂದಿ ಇದ್ದಾರೆ.

More articles

Latest article