ರಾಮ ಮಂದಿರ ಉದ್ಘಾಟನೆ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಹಲವು ವ್ಯಕ್ತಿಗಳು, ರಾಜಕೀಯ ನಾಯಕರು, ಸಿನಿಮಾ ನಟುರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ನಟಿ ಶೃತಿ ಹರಿಹರನ್ ಇನ್ನೊಂದು ಧರ್ಮದ ಪ್ರವಿತ್ರ ಸ್ಥಳದಲ್ಲಿ ದೇವಸ್ಥಾನ ಕಟ್ಟಿದ್ದಾರೆ ಎಂದು ಅಸಮಧಾನ ಹೊರಹಾಕಿದ್ದಾರೆ.
ನಟಿ ಶೃತಿ ಹರಿಹರನ್ ಈ ಕುರಿತು ಸಂವಿಧಾನದ ಪ್ರತಿಯನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಶ್ರೀರಾಮ ಮಂದಿರ ಉದ್ಘಾಟನೆ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದ್ದು, ಇನ್ನೊಂದು ಧರ್ಮದ ಪವಿತ್ರ ಸ್ಥಳದಲ್ಲಿ ದೇವಸ್ಥಾನ ಕಟ್ಟುವ ರಾಜಕೀಯ ಭರವಸೆ ನೀಡಿ, ಅದನ್ನು ಈಗ ಈಡೇರಿಸಿರುವುದು. ಅಲ್ಲದೆ ಅದನ್ನು ಸಂಭ್ರಮಿಸುತ್ತಿರುವ ರೀತಿ ಅಸಮಧಾನಕ್ಕೆ ಕಾರಣವಾಗಿದೆ. ಹೀಗೆ ಹೇಳುವುದರಲ್ಲಿ ನನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು, ನಾನು ಏನನ್ನು ನಂಬುತ್ತೇನೋ ಅದನ್ನು ಪಾಲಿಸುವುದು ಉತ್ತಮ ಪ್ರವೃತ್ತಿ. ಧರ್ಮದ ವಿಷಯದಲ್ಲಿ ದೇಶವು ತಟಸ್ಥವಾಗಿರಬೇಕೆಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಇದು ಯಾವುದೇ ಧರ್ಮದ ವಿರುದ್ಧ ತಾರತಮ್ಯ ಅಥವಾ ಪೋಷಣೆ ಮಾಡುವಂತಿಲ್ಲ. ನಾನಿಲ್ಲಿ ರಾಜಕೀಕರಣ ಆಗುತ್ತಿರುವುದನ್ನು ಗಮನಿಸುತ್ತಿದ್ದೇನೆ. ಇದನ್ನೆಲ್ಲ ನೋಡಿ ಸುಮ್ಮನೆ ಕುಳಿತುಕೊಳ್ಳುವುದು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಸಂವಿಧಾನ ಏಕೆ ಮುಖ್ಯ? ಎಂಬುದು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ರಾಮನಲ್ಲಿರುವ ಸ್ವಭಾವಗಳಿಂದ ಯಾರು ಪ್ರೇರಿತರಾಗುವುದಿಲ್ಲ? ಹನುಮಂತ ತನ್ನ ಎದೆಯನ್ನು ಬಗೆದು ರಾಮನನ್ನು ತೋರಿಸುವುದು ನನಗೆ ಬಹುಶ: ರಾಮ ನಮ್ಮೊಳಗೆ ಇದ್ದಾನೆ ಅಂತ ಹೇಳುವುದಕ್ಕಂತಲೇ ಉದ್ದೇಶಪೂರ್ವಕವಾಗಿ ಇದನ್ನು ಹೇಳಲಾಗಿದೆಯೇ?” ಎಂದು ಪ್ರಶ್ನಿಸಿದ್ದಾರೆ.