ರಾಜ್ಯದಲ್ಲಿ ಏನೇ ಆದರೂ ನಾನು ಹೊಣೆಯೇ?: ಡಿಕೆ ಶಿವಕುಮಾರ್ ಪ್ರಶ್ನೆ

Most read

ಬೆಂಗಳೂರು: ರಾಜ್ಯದಲ್ಲಿ ಏನೇ ಘಟನೆ ನಡೆದರೂ ನಾನೇ ಕಾರಣವಾ? ಬಿಜೆಪಿಯವರ ಮನೆಯಲ್ಲಿ, ಪಕ್ಷದಲ್ಲಿ ಅಷ್ಟೇ ಯಾಕೆ, ಅವರ ಹೊಟ್ಟೆಯೊಳಗೆ ಏನಾದರೂ ಆದರೆ ನಾನೇ ಕಾರಣನಾ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಬಿಜೆಪಿ ಶಾಸಕ ಸಿ.ಟಿ ರವಿಗೆ ಹೈಕೋರ್ಟ್ ಜಾಮೀನು ನೀಡಿರುವ ಬಗ್ಗೆ ಮಾತನಾಡಿದ ಅವರು ಜಾಮೀನು ವಿಚಾರ ಕೋರ್ಟ್‌ಗೆ ಸಂಬಂಧಿಸಿದ್ದು. ಎಲ್ಲದಕ್ಕೂ ನನ್ನನ್ನ ಕೇಳಿದರೆ ಹೇಗೆ? ರಾಜ್ಯದಲ್ಲಿ ಏನೇ ಆದರೂ ನಾನೇ ಕಾರಣ, ನನ್ನನ್ನು ನೆನಪಿಸಿಕೊಂಡಿಲ್ಲ ಎಂದರೆ ಅವರಿಗೆ ನಿದ್ದೆ ಬರಲ್ಲ ಎಂದು ಕುಟುಕಿದರು.

ಕಾನೂನು ಕೋರ್ಟ್ಗೆ ಗೌರವ ಕೊಡುತ್ತೇವೆ. ಮೊದಲು ಅವರು ಮಾತನಾಡಿದ್ದು ಸರಿಯೇ ತಪ್ಪೇ ಎಂದು ಕೇಳಿ. ಭಾಷೆ, ಸಂಸ್ಕ್ರತಿಯಿಂದ ಅವರದ್ದು ಹರುಕು ಬಾಯಿ ಎನ್ನುವುದು ಜಗತ್ತಿಗೆ ಗೊತ್ತಾಗಿದೆ. ಜಯಮಾಲಾ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೂ ಮಾತಾಡಿದ್ದರು. ನಿತ್ಯ ಸುಮಂಗಲಿ ಎಂಬ ಪದ ಬಳಸಿದ್ದರು. ಸಿ.ಟಿ ರವಿ ಮೇಲೆ ನನಗೂ ಗೌರವ ಇತ್ತು. ಚಿಕ್ಕಮಗಳೂರು ಜನ ಅಂದರೆ ಸಂಸ್ಕೃತಿಯುಳ್ಳ ಜನ. ಆದರೆ ಬಿಜೆಪಿಯಲ್ಲಿ ಇರುವ ಮುಖಂಡರು ಹೆಣ್ಣು ಮಕ್ಕಳ ಬಗ್ಗೆ ಸರಿಯಾಗಿ ಅಂತ ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಆತ್ಮ ಸಾಕ್ಷಿ ಮುಖ್ಯ ಆಗುತ್ತದೆ ಎಂದರು.

ಬಿಜೆಪಿ ಶಾಸಕ ಮುನಿರತ್ನ ಪ್ರಕರಣದಲ್ಲಿ ಆರ್. ಅಶೋಕ್ ಎಫ್ ಎಸ್ ಎಲ್ ರಿಪೋರ್ಟ್ ಬಂದ ತಕ್ಷಣ ಉಚ್ಚಾಟನೆ ಮಾಡುತ್ತೇವೆ ಎಂದು ಹೇಳಿದ್ದರು. ಈಗ ಸುಮ್ಮನಿದ್ದಾರೆ. ಮುತ್ತು ರತ್ನಗಳನ್ನು ಅವರೇ ಇಟ್ಟುಕೊಳ್ಳಲಿ, ಹೊರಗೆ ಹಾಕಿ ಎಂದು ಹೇಳಲ್ಲ ಎಂದರು. ಲೆಕ್ಕ ಚುಕ್ತಾ ಆಗುತ್ತೆ ಅಂತ ಸಿ ಟಿ ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಂತ ಲೆಕ್ಕವನ್ನೆಲ್ಲ ತುಂಬಾ ನೋಡಿದ್ದೇನೆ. ಬಹಳ ಸಂತೋಷ. ಅವರೊಬ್ಬರಿಗೆನಾ ಲೆಕ್ಕ ಚುಕ್ತಾ ಮಾಡಲು ಬರುವುದು? ಅವರವರ ಸಾಮರ್ಥ್ಯಕ್ಕೆ ಅವರವರು ಲೆಕ್ಕ ಚುಕ್ತಾ ಮಾಡ್ಕೊಳ್ತಾರೆ ಎಂದು ಟಾಂಗ್ ನೀಡಿದರು. ಶಿವಕುಮಾರ್ ಪ್ರಶ್ನಿಸಿದರು.

More articles

Latest article