ಏಕ ಕಾಲಕ್ಕೆ ಚುನಾವಣೆ; ಪ್ರಿಯಾಂಕಾ ಗಾಂಧಿ ವಿರೋಧ

Most read

ನವದೆಹಲಿ: ಏಕ ಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆಗೆ ಚುನಾವಣೆ ನಡೆಸುವುದು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧದ ನೀತಿ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಏಕ ಕಾಲಕ್ಕೆ ಚುನಾವಣೆ ನಡೆಸುವ ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದ ನಂತರ ಅವರು ಕಾವೇರಿದ ಚರ್ಚೆಯಲ್ಲಿ ಪಾಲ್ಗೊಂಡರು.

ಸಂವಿಧಾನ ತಿದ್ದುಪಡಿ ಮಸೂದೆ ಹಾಗೂ ಸಾಮಾನ್ಯ ಮಸೂದೆಯು ಒಕ್ಕೂಟ ರಚನೆಗೆ ವಿರುದ್ಧವಾದ ನೀತಿ ಹೊಂದಿವೆ ಎಂದು ಪ್ರತಿಪಕ್ಷಗಳು ಮಸೂದೆಗೆ ವಿರೋಧ ವ್ಯಕ್ತಪಡಿಸಿದವು. ಇದು ಸಂವಿಧಾನವನ್ನು ಬುಡಮೇಲು ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮತ ವಿಭಜನೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದಾಗ ಮಸೂದೆ ಮಂಡಿಸಲಾಯಿತು.

ಹೊಸ ಸಂಸತ್ ಭವನದಲ್ಲಿ ನಡೆದ ಲೋಕಸಭಾ ಕಲಾಪದಲ್ಲಿ ಇದೇ ಮೊದಲ ಬಾರಿಗೆ ಮತಯಂತ್ರಗಳನ್ನು ಬಳಕೆ ಮಾಡಲಾಗಿತ್ತು. ಇದರಲ್ಲಿ 269 ಸಂಸದರು ಮಸೂದೆ ಪರವಾಗಿ ಮತ್ತು 198 ಸಂಸದರು ಮಸೂದೆ ವಿರುದಧವಾಗಿ ಮತ ಚಲಾಯಿಸಿದರು.

More articles

Latest article