ಒಂದು ರಾಷ್ಟ್ರ ಒಂದು ಚುನಾವಣೆ ಪ್ರಜಾಪ್ರಭುತ್ವ ವಿರೋಧಿ: ಎಂ.ಕೆ.ಸ್ಟಾಲಿನ್

Most read

ಚೆನ್ನೈ: ಒಂದು ರಾಷ್ಟ್ರ ಒಂದು ಚುನಾವಣೆ ನೀತಿ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಗೆ ಬೆದರಿಕೆ ಹಾಕುವ ಒಕ್ಕೂಟ ವಿರೋಧಿ ಕ್ರಮ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಚುನಾವಣಾ ಸುಧಾರಣೆಯ ನೆಪದಲ್ಲಿ ಬಿಜೆಪಿ ಏಕೀಕೃತ ಆಡಳಿತವನ್ನು ಹೇರಲು ಪ್ರಯತ್ನಿಸುತ್ತಿದೆ. ಭಾರತ ಒಕ್ಕೂಟವು ಒಂದು ರಾಷ್ಟ್ರ ಒಂದು ಚುನಾವಣೆ ನೀತಿಯನ್ನು ವಿರೋಧಿಸುತ್ತದೆ. ಏಕೆಂದರೆ, ಅದು ದೇಶವನ್ನು ಏಕೀಕೃತ ಆಡಳಿತದ ಅಪಾಯಗಳಿಗೆ ತಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಅದರ ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವವನ್ನು ಕೊಲ್ಲುತ್ತದೆ ಎಂದು ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯ ಅಂತಿಮ ಗುರಿ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತವನ್ನು ತರುವುದೇ ಆಗಿದೆ. ಇದು ಭಾರತೀಯ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಈ ಪ್ರಸ್ತಾವನೆಯು ಅಂಗೀಕಾರವಾದರೆ, ರಾಜ್ಯ ಚುನಾವಣೆಗಳ ವ್ಯವಸ್ಥೆಗೆ ಅಪಾಯ ಉಂಟಾಗುತ್ತದೆ. ಈ ನಡೆಯು ಪ್ರಾದೇಶಿಕ ಭಾವನೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಭಾರತದ ವೈವಿಧ್ಯತೆಯನ್ನು ನಾಶಪಡಿಸುತ್ತದೆ ಎಂದು ಸ್ಟಾಲಿನ್ ವ್ಯಕ್ತಪಡಿಸಿದ್ದಾರೆ.

ಇಂತಹ ಅಂಸವಿಧಾನಿಕ ಕಾನೂನನ್ನು ಅಂಗೀಕರಿಸಲು ಅಗತ್ಯವಾದ ಸಂಸದೀಯ ಬಹುಮತದ ಕೊರತೆಯ ಹೊರತಾಗಿಯೂ ಬಿಜೆಪಿಯು ಈ ಪ್ರಸ್ತಾಪವನ್ನು ಮುಂದುವರೆಸಿದೆ. ದೇಶದ ಪ್ರಗತಿಗೆ ಅಡ್ಡಿಯಾಗುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ ದೆಶದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ದೇಶ ಮತ್ತು ಅದರ ವೈವಿಧ್ಯತೆ ಮತ್ತು ಸಂವಿಧಾನವನ್ನು ಉಳಿಸಲು ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಬೇಕು. ಚುನಾವಣಾ ಸುಧಾರಣೆಯ ನೆಪದಲ್ಲಿ ಹೇರಲಾದ ಈ ಅಸಹ್ಯಕರ ನೀತಿ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು. ಎದ್ದೇಳು ಭಾರತ! ಭಾರತೀಯ ಪ್ರಜಾಪ್ರಭುತ್ವದ ಮೇಲಿನ ಈ ದಾಳಿಯನ್ನು ನಮ್ಮೆಲ್ಲ ಶಕ್ತಿಯಿಂದ ವಿರೋಧಿಸೋಣ” ಎಂದು ಸ್ಟಾಲಿನ್ ಕರೆ ನೀಡಿದ್ದಾರೆ.

More articles

Latest article