10 ರಾಜ್ಯಗಳ 31 ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ; ವಯನಾಡ್ ಲೋಕಸಭಾ ಕ್ಷೇತ್ರದಲ್ಲೂ ಮತದಾನ; ಜಾರ್ಖಂಡ್ ನಲ್ಲಿ ಮೊದಲ ಹಂತದ ಚುನಾವಣೆ

Most read

ನವದೆಹಲಿ: ರಾಜಸ್ಥಾನದ 7, ಪಶ್ಚಿಮ ಬಂಗಾಳದ 6, ಅಸ್ಸಾಂನ 5, ಬಿಹಾರದ 4, ಕೇರಳ ಮತ್ತು ಕರ್ನಾಟಕದ ತಲಾ 3, ಮಧ್ಯಪ್ರದೇಶದ 2 ಮತ್ತು ಮೇಘಾಲಯ, ಗುಜರಾತ್, ಛತ್ತೀಸ್ಗಢದ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಜಾರ್ಖಂಡ್ನ 81 ವಿಧಾನಸಭಾ ಸ್ಥಾನಗಳ ಪೈಕಿ 43 ಸ್ಥಾನಗಳಿಗೆ ಇಂದು ಮೊದಲ ಹಂತದ ಚುನಾವಣೆ ನಡೆಯುತ್ತಿದೆ.


ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾದ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೂ ಮತದಾನ ಆರಂಭವಾಗಿದೆ. ಇಲ್ಲಿ ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಿದ್ದಾರೆ. ಇದು ಅವರಿಗೆ ಮೊದಲ ಚುನಾವಣೆಯಾಗಿದ್ದು ತೀವ್ರ ಕುತೂಹಲ ಕೆರಳಿಸಿದೆ.


ಜಾರ್ಖಂಡ್ನಲ್ಲಿ ಮೊದಲ ಹಂತದ ಕ್ಷೇತ್ರಗಳ ಪೈಕಿ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ 23 ಅದರ ಮಿತ್ರಪಕ್ಷಗಳಾದ ಕಾಂಗ್ರೆಸ್ 17 ಮತ್ತು ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಐವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪ್ರತಿಪಕ್ಷ ಬಿಜೆಪಿ 36, ಸಂಯುಕ್ತ ಜನತಾ ದಳ ಇಬ್ಬರು ಮತ್ತು ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಏಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಮತ್ತು ಅವರ ಪುತ್ರ ಬಾಬುಲಾಲ್ ಸೊರೇನ್, ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರ ಪತ್ನಿ ಮೀರಾ ಮುಂಡಾ, ಮಧು ಕೋಡಾ ಅವರ ಪತ್ನಿ ಗೀತಾ ಕೋಡಾ ಮತ್ತು ರಘುವರ್ ದಾಸ್ ಅವರ ಸೊಸೆ ಪೂರ್ಣಿಮಾ ಸಾಹು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.


2019 ರಲ್ಲಿ, ಜೆಎಂಎಂ 30 ಸ್ಥಾನಗಳನ್ನು ಗೆದ್ದಿತ್ತು ಮತ್ತು ಬಿಜೆಪಿ 25 ಸ್ಥಾನಗಳಲ್ಲಿ ಗೆದ್ದಿತ್ತು.

More articles

Latest article