ಸುಪ್ರೀಂ ಕೋರ್ಟ್ 51ನೇ ಸಿಜೆಐ ಆಗಿ ನ್ಯಾ.ಸಂಜೀವ್ ಖನ್ನಾ ಪ್ರಮಾಣ ವಚನ

Most read

ನವದೆಹಲಿ: ಸುಪ್ರೀಂ ಕೋರ್ಟ್ 51ನೇ ಮುಖ್ಯ ನ್ಯಾಯಮೂರ್ತಿಯಾಗಿನ್ಯಾ.ಸಂಜೀವ್ ಖನ್ನಾ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಖನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.


ನಿವೃತಿ ಹೊಂದಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಂದ ತೆರವಾದ ಸ್ಥಾನಕ್ಕೆ ಈಗ ಸಂಜೀವ್ ಖನ್ನಾ ನೇಮಕವಾಗಿದ್ದಾರೆ. ಖನ್ನಾ ಅವರು 2025ರ ಮೇ 13ರವರೆಗೆ ಅವರ ಅಧಿಕಾರಾವಧಿ ಇರಲಿದೆ.
ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕ್ರಮವನ್ನು ಎತ್ತಿಹಿಡಿದ ತೀರ್ಪು, ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಪಡಿಸಿದ ತೀರ್ಪು ಸೇರಿದಂತೆ ಸುಪ್ರೀಂ ಕೋರ್ಟ್ ನೀಡಿದ ಹಲವು ಮಹತ್ವದ ತೀರ್ಪುಗಳನ್ನು ನೀಡಿದ ಪೀಠಗಳಲ್ಲಿ ಖನ್ನಾ ಅವರೂ ಇದ್ದರು.


ನ್ಯಾ. ಖನ್ನಾ ಅವರ ತಂದೆ ದೇವರಾಜ್ ಖನ್ನಾ ದೆಹಲಿ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಯಾಗಿದ್ದರು. ಇವರ ಚಿಕ್ಕಪ್ಪ ಎಚ್. ಆರ್. ಖನ್ನಾ ಅವರೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದರು.

More articles

Latest article