ಪ್ರವಾಸಕ್ಕೆ ಬಂದಿದ್ದ ಮುಂಬೈನ 16 ವರ್ಷದ ಬಾಲಕಿಯ ಮೇಲೆ ಆಟೋ ಚಾಲಕ ಸೇರಿದಂತೆ ನಾಲ್ವರು ವ್ಯಕ್ತಿಗಳು ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ.
ರಜೆಯ ಹಿನ್ನೆಲೆಯಲ್ಲಿ ಮುಂಬೈನಿಂದ ಪುದುಚೆರಿಯ ಸಂಬಂಧಿಕರ ಮನೆಗೆ ಆಕೆ ಪ್ರವಾಸ ಹೋಗಿದ್ದಳು. ಅಕ್ಟೋಬರ್ 30ರಂದು ಪುದುಚೇರಿಯ ಮನೆಯಿಂದ ಆ ಹುಡುಗಿ ಕಾಣೆಯಾಗಿದ್ದು, ಆಕೆಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಹುಡುಗಿ ಆಟೋ ಹತ್ತಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆಟೋ ಚಾಲಕ ಕಾಜಾ ಮೊಯ್ದೀನ್ನನ್ನು ವಿಚಾರಣೆಗೊಳಪಡಿಸಿದಾಗ ಆತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ತಂತಿರಾಯನ್ ಕುಪ್ಪಂನ ಬೀಚ್ ರೆಸಾರ್ಟ್ಗೆ ಇಳಿಸಿದ್ದು, ಆಟೊ ಚಾಲಕ 16 ವರ್ಷದ ಬಾಲಕಿಗೆ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸುವ ಆಮಿಷವೊಡ್ಡಿ ಅತ್ಯಾಚಾರ ನಡೆಸಿದ್ದಾನೆ. ಚೆನ್ನೈನ ಮೂವರು ಯುವಕರು ಆಕೆಯ ಮೇಲೆ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.
ನವೆಂಬರ್ 2ರಂದು ಪುದುಚೇರಿ ಬೀಚ್ನಿಂದ ಆ ಬಾಲಕಿಯನ್ನು ರಕ್ಷಿಸಲಾಗಿದ್ದು, ವಿಚಾರಣೆ ವೇಳೆ ಆಟೋ ಚಾಲಕ ಮತ್ತು ಮೂವರು ಯುವಕರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮತ್ತಿಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.