ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಮಾಜಿಅಧ್ಯಕ್ಷ ಹಾಗು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಮ್ಮ ಪ್ರತಿಸ್ಫರ್ಧಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಹಿಂದಿಕ್ಕಿ ಗೆಲುವಿನ ಸಮೀಪದಲ್ಲಿದ್ದಾರೆ.
ಸದ್ಯ ನಡೆದಿರುವ ಮತ ಎಣಿಕೆಯ ವರದಿಯಂತೆ 248 ಎಲೆಕ್ಟೋರಲ್ ಮತಗಳನ್ನು ಟ್ರಂಪ್ ಪಡೆದಿದ್ದು, ಅವರ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ 214 ಮತಗಳನ್ನು ಪಡೆದು ಹಿಂದಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಮೊದಲ ಸುತ್ತಿನ ಮತ ಎಣಿಕೆಯಿಂದಲು ಮುನ್ನೆಡೆಯನ್ನು ಕಾಯ್ದುಕೊಂಡು ಬಂದ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗುರುತರ ಪಾತ್ರ ವಹಿಸುತ್ತಿರುವ 7 ಪ್ರಮುಖ ರಾಜ್ಯಗಳನ್ನು (ಸ್ವಿಂಗ್ ಸ್ಟೇಟ್ಸ್) ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಲು ಅಭ್ಯರ್ಥಿ ಒಟ್ಟು 538 ಎಲೆಕ್ಟೋರಲ್ ಮತಗಳ ಪೈಕಿ ಮ್ಯಾಜಿಕ್ ನಂಬರ್ 270 ಮತಗಳನ್ನು ಪಡೆಯಬೇಕು.
ಉತ್ತರ ಕರೋಲಿನಾ, ಪೆನ್ಸಿಲ್ವೇನಿಯಾ, ವಿಸ್ಕೋನ್ಸಿನ್, ಮಿಚಿಗನ್, ಜಾರ್ಜಿಯಾ, ಅರಿಜೋನಾ ಮತ್ತು ನೆವಡಾ ರಾಜ್ಯಗಳು ಚುನಾವಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ.