ಕ್ಷೇತ್ರದಲ್ಲಿ NDA ಅಭ್ಯರ್ಥಿ ನಿಖಿಲ್ ಕುಮಾರಣಸ್ವಾಮಿ ಅವರು ಎರಡನೇ ದಿನವೂ ಬಿರುಸಿನ ಪ್ರಚಾರ ನಡೆಸಿ ಕ್ಷೇತ್ರದ ಜನ ನನ್ನ ಕೈ ಹಿಡಿಯುತ್ತಾರೆ ಅಂತಹ ಕೆಲಸ ದೇವೇಗೌಡ್ರು ಹಾಗೂ ಕುಮಾರಣ್ಣ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಎರಡನೇ ದಿನದ ಪ್ರಚಾರದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೋಡಂಬಳ್ಳಿ ಒಟ್ಟು 18 ಗ್ರಾಮಗಳಿಗೆ ಭೇಟಿ ನೀಡ್ತಿದ್ದೇವೆ.ಜನ ರಾತ್ರಿವರೆಗೂ ಜೊತೆಯಲ್ಲಿ ಇದ್ದು ಬೆಂಬಲ ಕೊಡ್ತಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಅಭಿವೃದ್ಧಿ ಕೆಲಸ ನಮ್ಮ ಕೈ ಹಿಡಿಯುತ್ತವೆ ಎಂದು ತಿಳಿಸದರು.
ಡಿಸಿಎಂ ಡಿಕೆಶಿ ಸಿಎಂ ಆಗ್ತಾರೆ ಅದಕ್ಕಾಗಿ ಯೋಗೇಶ್ವರ್ ಗೆಲ್ಲಿಸಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆಸಿದ ಅವರು, ಕಾಂಗ್ರೆಸ್ ನಾಯಕರು ಹೇಳಿಕೆಗಳನ್ನ ಗಮನಿಸಿದ್ದೇನೆ. ರಾಜಕೀಯವಾಗಿ ಮಾತನಾಡೋದು ಸರ್ವೆ ಸಾಮಾನ್ಯ.ಆದರೆ ಮೊಮ್ಮಗನ ಪಟ್ಟಾಭಿಷೇಕಕ್ಕೆ ದೇವೇಗೌಡ್ರು ಆ್ಯಂಬುಲೆನ್ಸ್ ನಲ್ಲಿ ಬರ್ತಾರೆ ಅನ್ನೊದು ಸರಿಯಲ್ಲ. ಅಂತಹ ದುರ್ದೈವ ನಮಗೆ ಬಂದಿಲ್ಲ. ರಾಜ್ಯದ ಜನರ ಆಶಿರ್ವಾದಿಂದ ಅವರು ಶಕ್ತಿಯುತವಾಗಿದ್ದಾರೆ ದೀಪಾವಳಿ ಬಳಿಕ ಅವರೇ ಬಂದು ಪ್ರಚಾರ ಮಾಡ್ತಾರೆ ಎಂದು ಡಿಕೆ ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದರು.
ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ
ಚರ್ಚೆ ಮಾಡೋದಾದ್ರೆ ಅಭಿವೃದ್ಧಿ ವಿಚಾರಗಳ ಮೇಲೆ ಮಾತನಾಡಿ, ದೇವೇಗೌಡರ ಬಗ್ಗೆ ವಿರೋಧಿಗಳು ಹಗುರವಾಗಿ ಮಾತನಾಡುತ್ತಿದ್ದಾರೆ. ಅಬುಲೆನ್ಸ್ ನಲ್ಲಿ ಬಂದು ದೇವೇಗೌಡರು ಪ್ರಚಾರ ಮಾಡ್ತಾರೆ. ಮೊಮ್ಮಗನ ಪಟ್ಟಾಭಿಷೇಕಕ್ಕೆ ಆ್ಯಂಬುಲೆನ್ಸ್ ನಲ್ಲಿ ಬರ್ತಾರೆ ಅಂತ ಅವರ ಆರೋಗ್ಯದ ಬಗ್ಗೆ ಟೀಕೆ ಮಾಡ್ತಾರೆ.ನಾನು ಮಂಡ್ಯ ಸ್ಪರ್ಧೆ ಮಾಡಿದಾಗ ಸೋಲಿಸಿದ್ದು ಯಾರು.? ಅಲ್ಲೂ ನಾನು ಮಾಡದ ತಪ್ಪಿಗೆ ಅನ್ಯಾಯ ಆಯ್ತು. ರಾಮನಗರದಲ್ಲೂ ಕೂಪನ್ ಹಂಚಿ ಅಮಾಯಕರನ್ನು ದಾರಿತಪ್ಪಿಸಿದ್ರು. ಅಲ್ಲೂ ಕುತಂತ್ರದಿಂದ ನನ್ನನ್ನ ಸೋಲಿಸಿದ್ರು.ಕೊನೆ ಹಂತದಲ್ಲಿ ಕಾರ್ಯಕರ್ತರನ್ನ ಉಳಿಸಬೇಕು ಎರಡೂ ಪಕ್ಷಗಳ ಗೌರವ ಕಾಪಾಡಲು ಸ್ಪರ್ಧೆ ಮಾಡಿದ್ದೇನೆ.
ಪ್ರಧಾನಿ ಮೋದಿ ಜೀ ಅವರ ಗೌರವ ಉಳಿಸಬೇಕು. ನಿಮ್ಮ ಮನೆ ಮಗ ಅಂತ ತಿಳಿದು ಅವಕಾಶ ಕೊಡಿ. ನಿಮ್ಮ ಪರವಾಗಿ ಕೆಲಸ ಮಾಡಲು ಈ ಬಾರಿ ಗೆಲ್ಲಿಸಿ.ನಾನು ಚಿತ್ರ ನಟ ಆಗಿ ಕೆಲಸ ಮಾಡ್ತಿದ್ದೆ. ದೇವೇಗೌಡರ ಮಾರ್ಗದರ್ಶನ ಮೇಲೆ ಜನಸೇವೆಗೆ ಬಂದಿದ್ದೇನೆ. ಅಧಿಕಾರ ಇರಲಿ, ಇಲ್ಲದೇ ಹೋಗಲಿ ಮನೆ ಬಳಿ ಬಂದವರಿಗೆ ಸಹಾಯ ಮಾಡಿದ್ದೇವೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಮಂಡ್ಯದಲ್ಲಿ ಉದ್ಯೋಗ ಮೇಳ ಮಾಡಿದ್ವಿ. 5ಸಾವಿರ ಅರ್ಜಿಗಳು ಬಂದಿದ್ದವು. 1200 ಯುವಕರಿಗೆ ಉದ್ಯೋಗ ದೊರಕಿದೆ. ಯುವಜನತೆಗೆ ಸಾಕಷ್ಟು ಓದುತ್ತಿದ್ದಾರೆ, ಅವರಿಗೆ ಉದ್ಯೋಗವಕಾಶ ಸಿಗಬೇಕು. ಅದಕ್ಕೆ ಪ್ರಮಾಣಿಕ ಪ್ರಯತ್ನ ಮಾಡ್ತೇವೆ.ಕಾರ್ಖಾನೆಗಳನ್ನ ತಂದು ಎಲ್ಲರಿಗೂ ಉದ್ಯೋಗ ಕೊಡುವ ಕೆಲಸ ಮಾಡ್ತೇವೆ ಎಂದು ತಿಳಿಸಿದರು.
ನನ್ನ ಹಣೆಬರ ನಿರ್ಧಾರ ಮಾಡೋದು ದೇವರು, ಈ ಕ್ಷೇತ್ರದ ಜನ
ಚನ್ನಪಟ್ಟಣ ಕ್ಷೇತ್ರಕ್ಕೆ ಕುಮಾರಣ್ಣ 1500 ಕೋಟಿ ಅನುದಾನ ತಂದಿದ್ದಾರೆ.ನನ್ನ ಹಣೆಯ ಬರೆಯ ನಿರ್ಧಾರ ಮಾಡೋದು ಒಂದು ದೇವರು, ಇನ್ನೋಂದು ಈ ಕ್ಷೇತ್ರದ ಜನ.ವಿರೋಧಿಗಳು ನಮ್ಮ ಹಣೆಯ ಬರಹ ಬದಲಿಸಲು ಆಗಲ್ಲ. ದಯಮಾಡಿ ಈ ಬಾರಿ ನನಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.
25ಸಾವಿರ ಕೋಟಿ ಎಸ್ಇಪಿ, ಟಿಇಪಿ ಹಣ ಏನಾಯ್ತು.?
ಇದು ಕೇವಲ ನಿಖಿಲ್ ಕುಮಾರಸ್ವಾಮಿ ಗೆಲುವು ಸೋಲಿನ ವಿಚಾರ ಅಲ್ಲ. ಪ್ರಾದೇಶಿಕ ಪಕ್ಷಗಳ ಅಳಿವು, ಉಳಿವಿನ ಪ್ರಶ್ನೆ. ಪಕ್ಷ ಉಳಿಯಬೇಕು ಅಂದ್ರೆ ಬೆಂಬಲ ಕೊಡಿ. ಕಾಂಗ್ರೆಸ್ ನ ಹೇಳಿಕೆಗಳನ್ನ ಗಮನಿಸಿ. ಹಿಂದುಳಿದ ವರ್ಗಗಳ ಹೆಸರೇಳಿ ರಾಜಕೀಯ ಮಾಡ್ತಿದ್ದಾರೆ.ಅಧಿಕಾರಕ್ಕೆ ಬಂದಮೇಲೆ ಅದೇ ಸಮುದಾಯಕ್ಕೆ ಅನ್ಯಾಯ ಮಾಡ್ತಾವ್ರೆ. ಅಂಬೇಡ್ಕರ್ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದು ಇದೇ ಕಾಂಗ್ರೆಸ್. ಅಂಬೇಡ್ಕರ್ ತೀರಿಕೊಂಡಾಗ ಅವರಿಗೆ ಅರ್ಧ ಅಡಿ ಜಾಗ ಕೊಡಲಿಲ್ಲ. 25ಸಾವಿರ ಕೋಟಿ ಎಸ್ಇಪಿ, ಟಿಇಪಿ ಹಣ ಏನಾಯ್ತು.? ಅದನ್ನ ಎಲ್ಲಿಗೆ ವರ್ಗಾವಣೆ ಮಾಡಿದ್ದಾರೆ.? ವಾಲ್ಮೀಕಿ ಹಗರಣದ ಮಾಡಿ ಹಣ ದುರುಪಯೋಗ ಆಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.