ಭಾರತದ ಮೊದಲ ಖಾಸಗಿ ಮಿಲಿಟರಿ ವಿಮಾನ ತಯಾರಿಕಾ ಫ್ಯಾಕ್ಟರಿ ಉದ್ಘಾಟಿಸಿದ ಪ್ರಧಾನಿ ಮೋದಿ

Most read

ಭಾರತದ ಮೊದಲ ಖಾಸಗಿ ಯುದ್ಧವಿಮಾನ ತಯಾರಿಕೆಯ ಘಟಕ ಗುಜರಾತ್​ನ ವಡೋದರಾದಲ್ಲಿ ಚಾಲನೆಗೊಂಡಿದೆ. ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ ಈ ಕಾಂಪ್ಲೆಕ್ಸ್ ಅನ್ನು ಉದ್ಘಾಟನೆ ಮಾಡಿದ್ದಾರೆ.

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್​ನ ಕ್ಯಾಂಪಸ್​ನಲ್ಲಿರುವ ಈ ಘಟಕದಲ್ಲಿ ಸ್ಪೇನ್ ಮೂಲದ ವಿಮಾನ ತಯಾರಿಕೆಯ ಸಂಸ್ಥೆ ಏರ್​ಬಸ್ ಸಹಯೋಗದಲ್ಲಿ ಸಿ-295 ಮಿಲಿಟರಿ ವಿಮಾನಗಳನ್ನು ತಯಾರಿಸಲಾಗುತ್ತದೆ. ಒಟ್ಟಾರೆ ಈ ಯೋಜನೆಯಲ್ಲಿ 56 ವಿಮಾನಗಳ ತಯಾರಿಕೆಗೆ ಒಪ್ಪಂದವಾಗಿದೆ.

ಏರ್​ಬಸ್ ಸಂಸ್ಥೆ ತನ್ನ ದೇಶದಲ್ಲಿರುವ ತಯಾರಿಕಾ ಘಟಕದಿಂದ 16 ವಿಮಾನಗಳನ್ನು ತಯಾರಿಸಿ ಅಲ್ಲಿಂದಲೇ ನೇರವಾಗಿ ಭಾರತಕ್ಕೆ ಕಳುಹಿಸಲಿದೆ. ಇನ್ನುಳಿದ 40 ವಿಮಾನಗಳನ್ನು ಟಾಟಾ ಸಂಸ್ಥೆಯ ವಡೋದರಾ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತದೆ.

More articles

Latest article