ಮುಡಾ ಕಡತ ತೆಗೆದುಕೊಂಡು ಬಂದಿಲ್ಲ; ಧರ್ಮಸ್ಥಳದಲ್ಲಿ ಆಣೆಗೆ ಸಿದ್ಧ ಎಂದು ಬಿಜೆಪಿಗೆ ಸವಾಲ್ : ಸಚಿವ ಭೈರತಿ

Most read

ಮೈಸೂರು ಮುಡಾ ಕಚೇರಿಯಲ್ಲಿ ಇಡಿ ಅಧಿಕಾರಿಗಳ ತಂಡ ಶೋಧ ಕಾರ್ಯವನ್ನು ಮುಂದುವರಿಸಿದೆ. ಪ್ರತಿ ಕಡತದ ಜನ್ಮವನ್ನು ಜಾಲಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ದಾಳಿ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಭೈರತಿ ಸುರೇಶ್ ಮುಡಾ ಕಚೇರಿಯಿಂದ ನಾನು ಯಾವುದೇ ಕಡತವನ್ನು ತೆಗೆದುಕೊಂಡು ಹೋಗಿಲ್ಲ. ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ದ ಎಂದು ಹೆಚ್.ಡಿ. ಕುಮಾರಸ್ವಾಮಿ ಮತ್ತು ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.

ಕುಮಾರಸ್ವಾಮಿ ಮನೆಯಲ್ಲಿ ಫೈಲ್ ಇರಬಹುದು. ಇ.ಡಿ. ಯವರು ಅಲ್ಲಿಗೆ ಹೋಗಿ ಫೈಲ್ ಕೇಳಲಿ ಎಂದು ತಿರುಗೇಟು ನೀಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ ಇ.ಡಿ. ದಾಖಲೆಗಳನ್ನು ಪರಿಶೀಲಿಸಲಿ. ನಮ್ಮ ಅಭ್ಯಂತರವೇನಿಲ್ಲ. ಕಾನೂನು ಹೋರಾಟ ನಡೆಸುತ್ತೇವೆ. ಇ.ಡಿ. ದಾಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.


ಮುಡಾ ಹಗರಣದ ಮೂಲ ಪ್ರತಿ ಯಾವುದು, ಮೂಲ ಪ್ರತಿ ಎಲ್ಲಿದೆ? ಮೂಲ ಪ್ರತಿಗೆ ವೈಟ್ನರ್ ಹೇಗೆ ಬಂತು? ವೈಟ್ನರ್ ಹಿಂದಿನ ಪದಗಳು ಯಾವುದು ಎಂದು ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ. ಮುಡಾ ಆಯುಕ್ತ ರಘುನಂದನ್ , 2 ತಿಂಗಳ ಹಿಂದೆಯಷ್ಟೇ ನಾನು ವರ್ಗವಾಗಿ ಬಂದಿದ್ಧೇನೆ. ನಾನು ಬರುವ ಮುಂಚೆಯೇ ವೈಟ್ನರ್ ಹಾಕಲಾಗಿತ್ತು. ವೈಟ್ನರ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.

More articles

Latest article