ಹುಬ್ಬಳ್ಳಿಯಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಸಿಸಿಬಿ ವಶಕ್ಕೆ

Most read

ಹುಬ್ಬಳ್ಳಿ ನಗರದಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಹೆಸರಾಂತ ಬಾಂಡೆ ಅಂಗಡಿ ವ್ಯಾಪಾರಿ ಆಗಿದ್ದ ಚಗನ್ ಲಾಲ್ ಚೌಧರಿಯ ಕೆಲವು ವಿಡಿಯೋಗಳನ್ನು ಮಾಡಿಕೊಂಡು ನಂತರ ಬ್ಲಾಕ್ ಮೇಲ್ ಮಾಡುತ್ತಿದ್ದರು. ಎರಡು ಮೂರು ವಿಡಿಯೋ ತುಣುಕುಗಳನ್ನು ರೆಕಾರ್ಡ್ ಮಾಡಿಕೊಂಡು ಸುಮಾರು ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ, ಇದರಿಂದ ಮನನೊಂದ ಚಗನ್ ಲಾಲ್ ಚೌಧರಿ ಅಶೋಕ ನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಚಗನ್ ಲಾಲ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಹನಿಟ್ರ್ಯಾಪ್ ಮಾಡಿದ್ದ ಐವರನ್ನು ಬಂಧಿಸಿದ್ದಾರೆ.

ಮುಲ್ಲಾ ಓಣಿ ನಿವಾಸಿ ಜೋಯಾ ಶಬಾನಾ, ತೊರವಿ ಹಕ್ಕಲದ ಪರವಿನ್ ಭಾನು. ಡಾಕಪ್ಪ ಸರ್ಕಲ್ ನಿವಾಸಿ ಸಯೀದ್ ಹಾಗೂ ಹಳೆ ಹುಬ್ಬಳ್ಳಿಯ ನಿವಾಸಿಗಳಾದ ತೌಸಿಪ್ ಮತ್ತು ಅಬ್ದುಲ್ ರೆಹಮಾನ್ ಎಂಬುವರನ್ನು ಬಂಧಿಸಿದ್ದಾರೆ.

ಸಯೀದ್, ತೌಸಿಪ್, ಅಬ್ದುಲ್ ರೆಹಮಾನ್ ಅಂಗಡಿ ಹೊರಗೆ ಹಾಕಿರುವ ನಂಬರಗಳನ್ನು ಕಲೆಕ್ಟ ಮಾಡಿ ಜೋಯಾ ಹಾಗು ಪರವಿನ್ ಗೆ ನೀಡುತ್ತಿದ್ದರು. ಇವರಿಬ್ಬರು ಅವರ ನಂಬರ್ ಗೆ ಮೆಸೇಜ್, ಕಾಲ್ ಮಾಡಿ ಸಲಿಗೆಯಿಂದ ಬಲೆಗೆ ಹಾಕಿಕೊಂಡು ಅವರ ಜೊತೆ ಇರುವ ವಿಡಿಯೋಗಳನ್ನು ಮಾಡಿಕೊಂಡು ಬ್ಲಾಕ್‌ ಮೇಲ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

More articles

Latest article