ಮುಡಾ ಪ್ರಕರಣಕ್ಕೆ ಇಡಿ ಪ್ರವೇಶ: ಇದು ದ್ವೇಷದ ರಾಜಕಾರಣ ಎಂದ ಸಚಿವ ಮಹದೇವಪ್ಪ

Most read

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ‌ ನಿರ್ದೇಶನಾಲಯ ಮೊಕದ್ದಮೆ ದಾಖಲಿಸಿರುವುದಕ್ಕೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದು ಇದು ದ್ವೇಷದ ರಾಜಕಾರಣ ಎಂದು ಕಿಡಿಕಾರಿದ್ದಾರೆ‌.

ಫೇಸ್ ಬುಕ್ ಪೋಸ್ಟ್ ಮೂಲಕ ಸಚಿವ ಮಹದೇವಪ್ಪ ಆಕ್ರೋಶ ಹೊರಹಾಕಿದ್ದು, ಮುಡಾ ನಿವೇಶನ ಹಂಚಿಕೆಯಲ್ಲಿ ಹಗರಣ ಎನ್ನುತ್ತಿದ್ದರು. ಈಗ ಅಕ್ರಮ ಹಣ ವರ್ಗಾವಣೆಯಡಿ ಕೇಸ್ ದಾಖಲಿಸಿದ್ದಾರೆ. ಕೇಂದ್ರ ಸರ್ಕಾರ ದ್ವೇಷದ ರಾಜಕಾರಣದ ಭರದಲ್ಲಿ ಪ್ರಜ್ಞೆಯಿಲ್ಲದೆ ವರ್ತಿಸುತ್ತಿದೆ ಎಂದು ಹೇಳಿದ್ದಾರೆ.

ಇಡಿ, ಬಿಜೆಪಿ ನಡೆ ರಾಜ್ಯದ ಜನರ ವಿರೋಧ ಎದುರಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ನಡುವೆ ಮುಡಾ ಸೈಟ್ ಹಿಂದಿರುಗಿಸಿದ ಸಿಎಂ ಪತ್ನಿ ಪಾರ್ವತಿ ನಿರ್ಧಾರದ ಕುರಿತು ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಪತಿಯ ತೇಜೋವಧೆ ಆಗ್ತಿದೆ ಅನ್ನೋದು ಗೊತ್ತಾಗಿದೆ. ಹಾಗಾಗಿ ಸೈಟ್ ವಾಪಸ್ ಮಾಡ್ತಿದ್ದೇನೆಂದು ಹೇಳಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರ ಅನ್ನಿಸುತ್ತದೆ ಎಂದು ಹೇಳಿದ್ದಾರೆ‌.

ಮರ್ಯಾದೆ ಮುಖ್ಯ ಅನ್ನೋದೆ ಅವರ ಭಾವನೆ ಆಗಿದೆ. ಹಾಗಾಗಿಯೇ ಸೈಟ್ ವಾಪಸ್ ಮಾಡಿದ್ದಾರೆ ಅಷ್ಟೇ. ಆಪಾದನೆ ಬಂದ ತಕ್ಷಣ ಅದು ಸತ್ಯ ಆಗುವುದಿಲ್ಲ. ಕಾನೂನು ದೃಷ್ಟಿಯಲ್ಲಿ ಮುಂದೆ ಏನಾಗುತ್ತೆ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

More articles

Latest article