“ಮುಸಲ್ಮಾನರೆ, ನ್ಯೂಕ್ಲಿಯರ್ ಬಾಂಬ್ ಮಾಡಿರುವಂತ ಹಿಂದೂಗಳಿಗೆ ಈ ಗುಜರಿ, ಟಾಂಗಾದವರು ಮಾಡಿರುವಂತಹ ಪೆಟ್ರೋಲ್ ಬಾಂಬ್ ಮಾಡೋದಕ್ಕೆ ಬರೋದಿಲ್ವಾ? ಬ್ಯಾಲಿಸ್ಟಿಕ್ ಕ್ಷಿಪಣಿ ಮಾಡಿರುವಂತಹ ಹಿಂದೂಗಳಿಗೆ ಬಾಂಬ್ ತಯಾರಿಸಲು ಬರಲ್ಲ ಅಂದ್ಕೊಂಡಿದ್ದೀರಾ?” ಹೀಗಂತ ಹೇಳಿರುವುದು ಒಬ್ಬ ಮಾಜಿ ಸಂಸದ, ಬಿಜೆಪಿ ಮುಖಂಡ ಪ್ರತಾಪ್ ಸಿಂಹ.
ಶಹಪುರದಲ್ಲಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹೀಗೆ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ತಾವು ಮಾಡಿದ ದ್ವೇಷ ಭಾಷಣವನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಮಾಜದ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತಾವು ಹಂಚಿಕೊಂಡಿರುವ ವಿಡೀಯೋದಲ್ಲಿ ಮಾತನಾಡಿರುವ ಪ್ರತಾಪ್ ಸಿಂಗಾ ಅವರು, “ಬಾಂಗ್ಲಾದೇಶದಲ್ಲಿ ಏನಾಯ್ತು ಅಂತಾ ನಾವೆಲ್ಲ ನೋಡಿದ್ವಿ. ಅಲ್ಲಿ ಎದುರುಗಡೆ ಇರೋನು ಗೌಡಾ, ಲಿಂಗಾಯತ, ಎಸ್.ಸಿ, ಎಸ್ಟಿ ಇದ್ದಾನೆ ಅನ್ನೋ ಕಾರಣಕ್ಕೆ ಅಲ್ಲಿನ ದೇವಸ್ಥಾನ, ಮನೆಗಳಿಗೆ ಬೆಂಕಿ ಕೊಡಲಿಲ್ಲ. ಅಲ್ಲಿ ಹಿಂದೂ ಇದ್ದಾನೆ ಎನ್ನುವ ಕಾರಣಕ್ಕೆ ಅವರ ಮನೆ, ದೇವಸ್ಥಾನಗಳಿಗೆ ಬೆಂಕಿ ಕೊಟ್ಟರು. ಇಲ್ಲೂ ನಡೆಯೋದು ಅದೇ. ನಾಳೆ ಬೆಳಿಗ್ಗೆ ನಿಮ್ಮ ಮನೆಗಳಿಗೆ ಬೆಂಕಿ ಹಾಕುವವರು ನಿಮ್ಮ ಜಾತಿ ನೋಡೋದಿಲ್ಲ. ನೀವು ಹಿಂದೂ ಅಂತಾ ಹಣೆಯ ಮೇಲೆ ತಿಲಕ ಇಟ್ಟುಕೊಂಡಿದ್ದರೆ ನಿಮ್ಮ ಮನೆಯ ಮೇಲೆ ಕಲ್ಲು ಬೀಳುತ್ತೆ. ಪೆಟ್ರೋಲ್ ಬಾಂಬ್ ಬೀಳುತ್ತೆ. ಹೀಗಾಗಿ ನಾವು ಜಾತಿ ಭಾವನೆಯನ್ನು ಬಿಟ್ಟು ನಾವೆಲ್ಲ ಹಿಂದೂಗಳು ಎಂದು ಬದುಕೋಣ. ಜಗತ್ತಿನ ಸಾಫ್ಟವೇರ್ ಇಂಡಸ್ಟ್ರಿಯನ್ನು ಆಳುವವರು ನಾವು. ನಾವ್ಯಾರು ಈ ಗುಜರಿ ಸೋಡಾ ಬಾಟ್ಲಿ ಮಾರ್ತಿಲ್ಲ. ಹೀಗಾಗಿ ಹಿಂದೂಗಳು ಯಾರೂ ಇವರಿಗೆ ಹೆದರಬೇಕಿಲ್ಲ” ಎಂದು ಹರಿಹಾಯ್ತಿದ್ದಾರೆ.
ಹೀಗೆ, ಒಬ್ಬ ಮಾಜಿ ಸಂಸದರು, ಬರಹಗಾರರು ಆಗಿರುವ ಪ್ರತಾಪ ಸಿಂಹ ತಮ್ಮ ಮಾತಿನುದ್ದಕ್ಕೂ ಹೀಗೆ ಒಂದು ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಆರಂಭವಾಗಿದೆ. ಯಾರೋ ಕೆಲವರು ಮಾಡುವ ಸಮಾಜ ವಿರೋಧಿ ಕೃತ್ಯಗಳಿಗೆ ಒಂದು ಸಮುದಾಯವನ್ನು ಗುರಿಪಡಿಸಿ ಮಾತನಾಡಿರುವುದು ಎಷ್ಟು ಸರಿ ಎಂದು ಪ್ರತಾಪ ಸಿಂಹ ವಿರುದ್ಧ ಟೀಕೆಗಳು ಬರುತ್ತಿವೆ.
ಇವರ ಸಂಪೂರ್ಣ ಮಾತುಗಳೆಲ್ಲ ದ್ವೇಷಭಾಷಣವಾಗಿದ್ದು ಇಂತಹ ದ್ವೇಷದ ಮಾತುಗಳಿಂದ ಸಮಾಜದ ಶಾಂತಿ ಕದಡಲು ಪ್ರಯತ್ನಿಸಿರುವ ಪ್ರತಾಪ್ ಸಿಂಹ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಗಳೂ ಕೇಳಿ ಬರುತ್ತಿವೆ.
ಕೋಟ್:
ಗಣಪತಿ ಹಬ್ಬಕ್ಕೆ ಹೋದ ಪ್ರತಾಪ್ ತಿಮ್ಮ ಗಣೇಶನ ಬಗ್ಗೆ ಮಾತಾಡೋದು ಬಿಟ್ಟು, ಬಾಂಬು, ಕತ್ತಿ, ಕಲ್ಲುಗಳ ಬಗ್ಗೆ ಮಾಡಾಡ್ತಿದ್ದಾನೆ.. Nonsence.
-ರುದ್ರು ಪುನೀತ್ ಆರ್.ಸಿ.