ಇನ್ನೇನು ಆಂಧ್ರಕ್ಕೆ ಹಾರಲಿದ್ದ ಮುನಿರತ್ನ ಪೊಲೀಸರ ಕೈಗೆ ಸಿಕ್ಕಿದ್ದು ಹೇಗೆ ಗೊತ್ತೆ?

Most read

ವರದಿ: ಸಾಯಿನಾಥ್ ದರ್ಗಾ

ಕೋಲಾರ: ಬೆಂಗಳೂರಿನ ರಾಜರಾಜೇಶ್ವರ ನಗರ ಬಿ ಜೆಪಿ ಶಾಸಕ ಮುನಿರತ್ನ ತನ್ನ ಮೇಲೆ ದಾಖಲಾಗಿರುವ ಪ್ರಕರಣಗಳು ತೀವ್ರ ಸ್ವರೂಪದ್ದು ಎಂದು ಗೊತ್ತಾಗುತ್ತಿದ್ದಂತೆ ತಲೆಮರೆಸಿಕೊಳ್ಳುವ ಸಂಚು ರೂಪಿಸಿದ್ದ. ಬೆಂಗಳೂರು ಮತ್ತು ಕೋಲಾರ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ಮುನಿರತ್ನದ ತಂತ್ರವನ್ನು ವಿಫಲಗೊಳಿಸಿಬಿಟ್ಟಿತು.

ಜಾತಿ ನಿಂದನೆ ಹಾಗೂ ಜೀವ ಬೆದರಿಕೆಯ ಎರಡು ದೂರುಗಳು ದಾಖಲಾಗುತ್ತಿದ್ದಂತೆ ಆಂಧ್ರ ಮೂಲದವನೇ ಆದ ಆಂಧ್ರಪ್ರದೇಶದ ತನ್ನ ಸಂಬಂಧಿಗಳ ತೋಟದ‌ ಮನೆಯೊಂದರಲ್ಲಿ ತಲೆಮರೆಸಿಕೊಳ್ಳುವ ಪ್ಲಾನ್ ರೂಪಿಸಿದ್ದ. ಆದರೆ ಮುನಿರತ್ನನ ಮೊಬೈಲ್ ಟವರ್ ಲೊಕೇಷನ್ ಜಾಡು ಹಿಡಿದಿದ್ದ ಬೆಂಗಳೂರು ಪೊಲೀಸರು ಕೋಲಾರ ಪೊಲೀಸರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು.

ಇನ್ನೇನು ಮುನಿರತ್ನ ಕರ್ನಾಟಕದ ಗಡಿ ದಾಟುವ ಸಂದರ್ಭದಲ್ಲಿ ಕೋಲಾರದ ನಂಗಲಿ ಚೆಕ್ ಪೋಸ್ಟ್ ಬಳಿ ಪೊಲೀಸರು ಅಡ್ಡಗಟ್ಟಿ ವಾಹನ ತಡೆದಿದ್ದಾರೆ.

ಬೆಂಗಳೂರಿನ ಪೋಲೀಸರ ತಂಡವೊಂದು ಮುನಿರತ್ನ ರವರ ಮೊಬೈಲ್ ಟವರ್ ಲೊಕೇಷನ್ ಹಿಂಬಾಲಿಸಿಕೊಂಡು ಬರುತ್ತಿತ್ತು. ರಾಷ್ರ್ಟೀಯ ಹೆದ್ದಾರಿಯ ಮೂಲಕ ಆಂಧ್ರದತ್ತ ಪ್ರಯಾಣಿಸುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದು ಅವರನ್ನ ಹಿಂಬಾಲಿಸುತ್ತಿತ್ತು.

ಹೆದ್ದಾರಿಯಲ್ಲಿರುವ ನಂಗಲಿ ಬಳಿ ಟವರ್ ಲೊಕೇಷನ್ ರಿಚ್ ಆಗದ ಕಾರಣ ನಂಗಲಿ ಪ ಪೋಲೀಸರಿಗೆ ಸುದ್ದಿ ಮುಟ್ಟಿಸಿ ಮುನಿರತ್ನನನ್ನು ಅಡ್ಡಗಟ್ಟಲು ಹೇಳಲಾಗಿತ್ತು.

ಕ್ಷಣ ಮಾತ್ರದಲ್ಲಿ ಕಾರ್ಯ ಪ್ರವೃತ್ತರಾದ ನಂಗಲಿ ಸಬ್ ಇನ್ಸ್ ಪೆಕ್ಟರ್ ಆರ್ ಎಸ್ ಗೌಡ ಮತ್ತವರ ತಂಡ ಜೆ ಎಸ್ ಆರ್ ಟೋಲ್ ಗೇಟ್ ಬಳಿ ಸಂಜೆ ಸುಮಾರು ಐದು ಗಂಟೆ ಸಮಯದಲ್ಲಿ ಮುನಿರತ್ನರನ್ನ ವಶಕ್ಕೆ ಪಡೆದರು. ಮುನಿರತ್ನನನ್ನು ಹಿಂಬಾಲಿಸಿಕೊಂಡು ಬಂದಿದ್ದ ಬೆಂಗಳೂರು ಪೋಲೀಸರು ನಂಗಲಿ ಪೊಲೀಸರಿಂದ ಆತನನ್ನು ವಶಕ್ಕೆ ಪಡೆದುಕೊಂಡರು.

More articles

Latest article