ಕೇಂದ್ರ ಸರ್ಕಾರದ ಕೆಲಸವೇ ಆಪರೇಷನ್ ಮಾಡೊದು, ಸರ್ಕಾರ ಬೀಳಿಸೋದು: ಸಚಿವ ದಿನೇಶ್ ಗುಂಡೂರಾವ್

ಆಪರೇಷನ್ ಮಾಡುವುದು ಸರ್ಕಾರ ಬೀಳಿಸುವುದು ಕೇಂದ್ರ ಸರ್ಕಾರದವರಿಗೆ ಇದೇ ಕೆಲಸವಾಗಿದೆ. ಸರ್ಕಾರ ಬೀಳಿಸುವುದು ಒಂದೇ ಅವರ ಕಾರ್ಯಕ್ರಮ ಎಂದು ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ದೀಪಾವಳಿ ನಂತರ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂಬ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಅದಕ್ಕೆ ಈಗೆಲ್ಲಾ ಮಾತಾಡುತ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವುದು, ಬೀಳಿಸುವುದು, ಒಡೆಯುವುದು, ಆಪರೇಷನ್ ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದವರಿಗೆ ಇದೇ ಕೆಲಸವಾಗಿದೆ. ಸರ್ಕಾರ ಬೀಳಿಸುವುದು ಒಂದೇ ಅವರ ಕಾರ್ಯಕ್ರಮ ಎಂದು ಟೀಕಿಸಿದರು.

ನಾಳೆ ಸಿಎಂ ಭವಿಷ್ಯ ನಿರ್ಧಾರವಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಗುಂಡೂರಾವ್, ನಾಳೆ ಏನೂ ಆಗುವುದಿಲ್ಲ. ಸಿಎಂ ಭವಿಷ್ಯವನ್ನು ನಿರ್ಧರಿಸುವ ಪ್ರಶ್ನೆಯಿಲ್ಲ. ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಸಿಎಂ ರೇಸ್​ನಲ್ಲಿ ಯಾರೂ ಇಲ್ಲ ಎಂದು ಸಮರ್ಥಿಸಿಕೊಂಡರು.

ಕೋರ್ಟ್​ನಲ್ಲಿ ಯಾವುದೇ ರೀತಿಯ ವ್ಯತಿರಿಕ್ತವಾದ ತೀರ್ಮಾನ ಬರುವುದಿಲ್ಲ. ರಾಜ್ಯಪಾಲರು ತನಿಖೆಗೆ ಕೊಟ್ಟಿರುವುದು ಸರಿಯೋ ಅಥವಾ ತಪ್ಪೋ ಅಷ್ಟೇ ಇರುವುದು. ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.

More articles

Latest article

Most read