ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಗೆ ಪರಪ್ಪನ ಅಗ್ರಹಾರದಲ್ಲಿ ವಿವಿಐಪಿ ಸೌಲಭ್ಯ ಕೊಡುತ್ತಿರುವುದು ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಕುರಿತು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿಕೆ ನೀಡಿದ್ದಾರೆ.
ಜೈಲಿನಲ್ಲಿ ವಿಶೇಷ ಆತಿಥ್ಯ ಬಗ್ಗೆ ಟ್ವೀಟ್ ಮಾಡಿ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದದಲ್ಲಿ ಅತ್ಯಾಚಾರ, ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ನಟ ದರ್ಶನ್ ಗೆ ವಿಶೇಷ ಸವಲತ್ತು ನೀಡಲಾಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಾ ಪ್ರಿಯಾಂಕಾ ಗಾಂಧಿ, ಸುಪ್ರಿಯಾ ಶ್ರೀನೇಥ್ ಎಂದು ಪ್ರಶ್ನಿಸಿದ್ದಾರೆ.
ಈ ಹೇಳಿಕೆಯಿಂದಾಗಿ ದರ್ಶನ್ ಅಭಿಮಾನಿಗಳಂತು ಕೋಪಗೊಂಡಿದ್ದು, ನೀವು ಆ ಹುದ್ದೆಗೆ ಅನ್ಫಿಟ್. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈವರೆಗೆ ಯಾರದ್ದೆಲ್ಲ ಹೆಸರು ಕೇಳಿ ಬಂದಿದೆ. ಅಂತವರ ಹೆಸರನ್ನು ಉಲ್ಲೇಖಿಸಿ ದರ್ಶನ್ ಅತ್ಯಾಚಾರ ಪ್ರಕರಣ ಆರೋಪಿಯಲ್ಲಿ ಎಂದಿದ್ದಾರೆ.
ಕೊಲೆ ಕೇಸಿನಲ್ಲಿ ದರ್ಶನ್ ಜೈಲಿನಲ್ಲಿದ್ದಾರೆ. ಆದರೆ ಲೈಂಗಿಕ ದೌರ್ಜನ್ಯವೆಸಗಿದ ಬ್ರಿಜ್ ಭೂಷಣ್ ಹೊರಗಡೆ ರೊಮ್ಯಾನ್ಸ್ ಮಾಡ್ಕೊಂಡ್ ಆರಾಮವಾಗಿ ಇದ್ದಾರೆ ಅವರ ಬಗ್ಗೆ ಸಹ ಮಾತಾಡಿ ರೇಖಾ ಶರ್ಮ ಅವರೇ ಎಂದು ಟೀಕಿಸಿದ್ದಾರೆ.
ದರ್ಶನ್ ಅತ್ಯಾಚಾರ ಆರೋಪಿಯಲ್ಲ ಸುಖಾಸುಮ್ಮನೆ ಅವರ ಕುರಿತು ಸುಳ್ಳು ಹಬ್ಬಿಸಬೇಡಿ ಎಂದು ಕಿಡಿಕಾರಿದ್ದಾರೆ.
ನಿಮಗೆ ಹಣ ನೀಡಿದವರು ಮಾಹಿತಿಯನ್ನು ಸರಿಯಾಗಿ ಕೊಟ್ಟಿಲ್ಲ ಅನ್ನಿಸುತ್ತೆ ಅವರು ಕೊಲೆ ಆರೋಪಿ, ಅತ್ಯಾಚಾರ ಆರೋಪಿಯಲ್ಲ ಎಂದು ಕಿಚಾಯಿಸಿದ್ದಾರೆ.
ಟ್ವೀಟ್ ಇಲ್ಲಿದೆ:-