ಮುಡಾ ಬದಲಿ ನಿವೇಶನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿದ ಪ್ಯಾಸಿಕ್ಯೂಸನ್ ಅನುಮತಿಯನ್ನು ವಿರೋಧಿಸಿ ಹಲವು ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸುಇದ್ದು ಈಗ ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವ ಕೇಂದ್ರ ಬಿಜೆಪಿ ಹಾಗೂ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಪತ್ರಿಕಾ ಹೃಏಳಿಕೆ ಬಿಡುಗಡೆ ಮಾಡಿರುವ ಅವರು, ಭಾರತದ ಜನರು ತಮ್ಮ ಅಧಿಕಾರವನ್ನು ವಿರುದ್ಧ ಮತ ಚಲಾಯಿಸಿದ ನಂತರವೂ ಪಾಠ ಕಲಿಯದ ಈ ಗುಜರಾತ್ ಜೋಡಿ ಮತ್ತೊಮ್ಮೆ ಕುತಂತ್ರದ ಆಟಕ್ಕೆ ಇಳಿದಿದೆ ಎಂದು ಮೋದಿ ಹಾಗೂ ಅಮಿತ್ ಶಾ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಪ್ರತಿಪಕ್ಷದ ಸರ್ಕಾರಗಳನ್ನು ಅಸ್ಥಿರಗೊಳಿಸಲು ನಿರ್ಧರಿಸಿರುವ ಈ ಜೋಡಿ ಈಗ ಕರ್ನಾಟಕ ಮತ್ತು ಅದರ ಹಿಂದುಳಿದ ವರ್ಗದ ಜನಪ್ರಿಯ ಮುಖ್ಯಮಂತ್ರಿಗಳ ಮೇಲೆ ಕಣ್ಣಿಟ್ಟಿದ್ದಾರೆ, ರಾಜಭವನದಲ್ಲಿ ತಮ್ಮ ಸೇವಕನನ್ನು ತಮ್ಮ ಆಟಕ್ಕೆ ಬಳಸಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಮತ್ತದರ ನಾಯಕತ್ವ ಬಲಿಷ್ಠವಾಗಿದ್ದು ಅಲುಗಾಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
1978ರಲ್ಲಿ ಮೊರಾರ್ಜಿ ದೇಸಾಯಿ ಸರಕಾರವು ಕರ್ನಾಟಕದ ದೇವರಾಜ ಅರಸು ಸರಕಾರವನ್ನು ರಾಜ್ಯಪಾಲರ ಆಟದ ಮೂಲಕ ವಜಾಗೊಳಿಸಿ ವಿಧಾನಸಭೆಯನ್ನು ವಿಸರ್ಜಿಸಿತ್ತು. ಆದರೆ ಅದೇ ರಾಜ್ಯಪಾಲರು ಚುನಾವಣೆಯ ನಂತರ ಮತ್ತೊಮ್ಮೆ ಅವರಿಗೇ ಪ್ರಮಾಣ ವಚನ ಭೋದಿಸಬೇಕಾಯ್ತು. ಕರ್ನಾಟಕದ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ, ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಾವು ಹೋರಾಡಿ ಗೆಲ್ಲುತ್ತೇವೆ. ನಮ್ಮ ಸ್ವಾತಂತ್ರ್ಯವನ್ನು ಪಡೆಯಲು ಕಾಂಗ್ರೆಸ್ ಆ ಕಾಲದ ಪ್ರಬಲ ಸಾಮ್ರಾಜ್ಯವನ್ನು ಸೋಲಿಸಿತು. ಇಂದು ಮೋದಿ ಸರ್ವಾಧಿಕಾರದ ವಿರುದ್ಧ ಹೋರಾಡುತ್ತದೆ ಮತ್ತು ಬಹಳ ದಿನ ಇವರ ಅಧಿಕಾರ ಉಳಿಯುವುದಿಲ್ಲ ಎಂದು ಹೇಳಿದ್ದಾರೆ