ಹಾಸನ | ಅಭಿಮನ್ಯು ನೇತೃತ್ವದಲ್ಲಿ ಕಾಡಾನೆಗಳ ಕಾರ್ಯಾಚರಣೆ ಆರಂಭ!

Most read

ಹಾಸನ, ಸಕಲೇಶಪುರದಾದ್ಯಂತಯ ಕಾಡಾನೆಗಳ (Elephant Squad) ಹಾವಳಿಯನ್ನು ತಡೆಗಟ್ಟಲು ಇಂದಿನಿಂದ ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಕಾಡಾನೆಗಳ ಸೆರೆ ಕಾರ್ಯಾಚರಣೆ ನಡೆಯಲಿದೆ.

ಡಿಸೆಂಬರ್ 4 ರಂದು ಕ್ಯಾಪ್ಟನ್ ಅರ್ಜುನನ ವೀರ ಮರಣದಿಂದ ಸ್ಥಗಿತಗೊಂಡಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ಇಂದಿನಿಂದ ಪುನಃ ಆರಂಭಗೊಂಡಿದೆ.

ಹಾಸನದ ನಲ್ಲೂರು ಗ್ರಾಮದ ಸಾರಾ ಎಸ್ಟೇಟ್‌ನಲ್ಲಿರುವ ಒಂಟಿ ಸಲಗವನ್ನು ಹಿಡಿಯಲು ಅಭಿಮನ್ಯು, ಕರ್ನಾಟಕ ಭೀಮ, ಧನಂಜಯ, ಸುಗ್ರೀವ, ಅಶ್ವತ್ಥಾಮ, ಪ್ರಶಾಂತ, ಹರ್ಷ, ಮಹೇಂದ್ರ ಸೇರಿ ಎಂಟು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಕಾರ್ಯಾಚರಣೆ ನಡೆಸಲಿದ್ದಾರೆ.

ಇಂದಿನಿಂದ ಸತತ ಒಂದು ತಿಂಗಳ ಕಾಲ ನಡೆಯಲಿರುವ ಕಾಡಾನೆಗಳ ಸೆರೆ ಕಾರ್ಯಾಚರಣೆ, ಆನೆ ಸಿಕ್ಕಿದ ನಂತರ ಅದನ್ನು ಸ್ಥಳಾಂತರ ಕಾರ್ಯವೂ ನಡೆಯಲಿದೆ. ಮೊದಲು ಮೂರು ಸಲಗಗಳನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಅರಣ್ಯ ಇಲಾಖೆ ಸ್ಥಳಾಂತರ ಕೆಲಸ ಮಾಡಲಿದೆ. ನಂತರ ಇನ್ನೂ ಏಳು ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂವರು ವೈದ್ಯರು ಹಾಗೂ ನುರಿತ ತಂಡದೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಯ ಸೆರೆಗೆ ಕಾರ್ಯಾಚರಣೆ ಇಂದು ಬೆಳಗ್ಗೆ ಆರಂಭಿಸಿದೆ.

More articles

Latest article