ಕಾವೇರಿ ನದಿಯಲ್ಲಿ ಹೆಚ್ಚಿದ ನೀರು : ಹೊಗೆನಕಲ್ ದೋಣಿ ವಿಹಾರ ಸ್ಥಗಿತ, ಪ್ರವಾಸಿಗರಿಗೆ ನಿರ್ಬಂಧ

Most read

KRSನಿಂದ ಒಂದೂವರೆ ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸಿದ್ದರಿಂದ ಚಾಮರಾಜನಗರ ಜಿಲ್ಲೆಯ ಕರ್ನಾಟಕ ತಮಿಳುನಾಡು ಗಡಿ ಹೊಗೆನಕಲ್‌ನಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿರುವ ಹಿನ್ನಲೆ ದೋಣಿ ವಿಹಾರ ಮತ್ತು ಪ್ರವಾಸಿಗರಿಗೆ ನಿರ್ಬಂಧ ಹೇರಿದೆ.

KRSನಿಂದ ನೀರು ಬಿಡುಗಡೆಯಾಗಿದ್ದು, ನೀರಿನ ರಭಸಕ್ಕೆ ಹೊಗೆನಕಲ್ ಬಳಿ ಇರುವ ಕಲ್ಲು, ಗುಡ್ಡ, ಜಲಪಾತಗಳು ಕೂಡ ಮುಳುಗಡೆಯಾಗಿವೆ. ಈ ಹಿನ್ನೆಲೆ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಮುನ್ನೆಚ್ಚರಿಕೆ ಕ್ರಮವಾಗಿ ಹೊಗೆನಕಲ್‌ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.

ಕರ್ನಾಟಕ ಅಷ್ಟೇ ಅಲ್ಲದೇ ತಮಿಳುನಾಡಿನಲ್ಲೂ ಕೂಡ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ಹೊಗೆನಕಲ್‌ನತ್ತ ಬರುವ ಪ್ರವಾಸಿಗರನ್ನು ಅರಣ್ಯ ಇಲಾಖೆ ಸಿಬ್ಬಂದಿ ತಡೆದು ವಾಪಸ್ ಕಳುಹಿಸುತ್ತಿದ್ದಾರೆ. ಕಾವೇರಿ ನೀರು ಹೊಗೆನಕಲ್ ಮೂಲಕ ಹರಿದು ಮೆಟ್ಟೂರ್ ಜಲಾಶಯಕ್ಕೆ ಸೇರುತ್ತದೆ.

More articles

Latest article