ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಪುನರ್ ರಚನೆ

Most read

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿರುವ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯನ್ನು 3 ವರ್ಷಗಳ ಅವಧಿಗೆ ಪುನರ್ ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ವನ್ಯಜೀವಿ ಮಂಡಳಿಗೆ ಸಿಎಂ ಅಧ್ಯಕ್ಷರಾಗಿರುತ್ತಾರೆ. ಅರಣ್ಯ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಸಚಿವ ಎಂ.ಬಿ. ಪಾಟೀಲ್ ಪುತ್ರ ಧ್ರುವ್ ಎಂ ಪಾಟೀಲ್, ವಿನಯ್ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿ ಮಂಡಳಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ.

ಸದ್ಯ ಈಗ ಶಾಸಕರ ಕೋಟಾದಡಿ 10 ಸದಸ್ಯರನ್ನ ನೇಮಕ ಮಾಡಿ ಅರಣ್ಯ ಇಲಾಖೆ ಆದೇಶ ಹೊರಡಿಸಿದ್ದು, ರಾಮದುರ್ಗ ಶಾಸಕ ಅಶೋಕ್ ಎಂ. ಪಟ್ಟಣ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ಸರ್ಕಾರೇತರ ಸಂಸ್ಥೆಗಳ ಕೋಟಾದಡಿ ವೈಲ್ಡ್‌ಲೈಫ್‌ ಅಸೋಸಿಯೇಷನ್‌ ಆಫ್ ಸೌತ್ ಇಂಡಿಯಾ ವನ್ಯಜೀವಿ ಸಂಘದಿಂದ ಸುಶೀಲಗೈನಚಂದ್, ಟೈಗರ್ಸ್‌ ಅನ್‌ಲಿಮಿಟೆಡ್ ವನ್ಯಜೀವಿ ಸಮಾಜದಿಂದ ಸೀಮಾ ಬೇಗಂ ಖಲೀಲ್, ಬೆಂಗಳೂರು ಪರಿಸರ ಟ್ರಸ್ಟ್‌ನಿಂದ ಡಾ.ಆರ್.ವಿ.ದಿನೇಶ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಸಂರಕ್ಷಣಾ ವಿಶೇಷ ತಜ್ಞರು, ಜೀವಿಶಾಸ್ತ್ರ ತಜ್ಞರು ಹಾಗೂ ಪರಿಸರವಾದಿಗಳ ಕೋಟಾದಿಂದ ಬೆಂಗಳೂರಿನ ರವೀಂದ್ರ ರಘುನಾಥ, ಡಾ.ರಾಜಕುಮಾರ್ ಎಸ್ ಅಲ್ಲೆ, ಅಜಿತ್ ಕರಿಗುಡ್ಡಯ್ಯ, ಧ್ರುವ ಎಂ ಪಾಟೀಲ್, ಮಲ್ಲಪ್ಪ ಎಸ್ ಅಂಗಡಿ, ವಿರಾಜಪೇಟೆಯಿಂದ ಸಂಕೇತ ಪೂವಯ್ಯ, ಧಾರವಾಡದ ವೈಶಾಲಿ ಕುಲಕರ್ಣಿ, ಬೀದರ್‌ನ ವಿನಯ್ ಕುಮಾರ್ ಮಾಳಿಗೆ, ಮೈಸೂರಿನ ಡಾ.ಸಂತೃಪ್ತ ಅವರನ್ನು ನೇಮಕ ಮಾಡಲಾಗಿದೆ.

ಮಂಡಳಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು, ಸಂಸ್ಥೆಗಳ ಹತ್ತು ಅಧಿಕಾರಿಗಳು ಪದನಿಮಿತ್ತ ಸದಸ್ಯರು ರಾಜ್ಯದ ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದು ತಿಳಿಸಿದೆ.

More articles

Latest article