ಅಮೆರಿಕ ಮಾಜಿ ಅಧ್ಯಕ್ಷ & ಹಾಲಿ ಚುನಾವಣೆಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಪೋಟೋ ಗುಂಡಿನ ದಾಳಿ ಮಾಡಲಾಗಿದೆ. ಹೌದು, ಇಂದು ಚುನಾವಣೆಯ ಪ್ರಚಾರಕ್ಕೆ ತೆರಳಿದ್ದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಭೀಕರ ಗುಂಡಿನ ದಾಳಿ ಮಾಡಲಾಗಿದೆ. ಈ ಕುರಿತು ದೇಶದ ರಾಜಕಾರಣಿ ಜೊತೆ ವಿವಿದ ದೇಶದ ಗಣ್ಯರು ಕೂಡ ಟ್ವೀಟ್ ಮಾಡಿ ಖಂಡಿಸಿದ್ದಾರೆ.
ಮೊದಲಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಟ್ವೀಟ್ ಮಾಡಿದ್ದು, ‘ಡೊನಾಲ್ಡ್ ಟ್ರಂಪ್ ಸುರಕ್ಷಿತವಾಗಿದ್ದಾರೆ ಎಂದು ಸುದ್ದಿ ತಿಳಿದು ನಿರಾಳವಾಗಿದ್ದೇನೆ. ಟ್ರಂಪ್ ಮತ್ತು ಅವರ ಕುಟುಂಬದವರು ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ. ಈ ರೀತಿಯ ಹಿಂಸಾಚಾರಕ್ಕೆ ಅಮೆರಿಕದಲ್ಲಿ ಯಾವುದೇ ಸ್ಥಳವಿಲ್ಲ’ ಎಂದು ಹೇಳಿದ್ದಾರೆ.
ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಟ್ವೀಟ್ ಮಾಡಿದ್ದು, ‘ಈ ಹೇಯ ಕೃತ್ಯವನ್ನು ಎಲ್ಲರೂ ಒಗ್ಗಟ್ಟಿನಿಂದ ಖಂಡಿಸುತ್ತೇವೆ. ಇದು ಮತ್ತಷ್ಟು ಹಿಂಸಾಚಾರಕ್ಕೆ ಕಾರಣವಾಗದಂತೆ ಎಚ್ಚರ ವಹಿಸಬೇಕಿದೆ’ ಎಂದು ಹೇಳಿದ್ದಾರೆ.
ಈ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ‘ನನ್ನ ಮಿತ್ರ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ನಡೆಸಲಾಗಿರುವ ದಾಳಿಯು ನನಗೆ ಕಳವಳ ಉಂಟುಮಾಡಿದೆ. ಈ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ರಾಜಕೀಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸೆಗೆ ಅವಕಾಶವಿಲ್ಲ. ಟ್ರಂಪ್ ಅವರು ಬೇಗನೆ ಚೇತರಿಸಿಕೊಳ್ಳಲಿ. ಮೃತರ ಕುಟುಂಬದವರು ಹಾಗೂ ಗಾಯಗೊಂಡವರಿಗಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಟ್ವೀಟ್ ಮಾಡಿ, ‘ಟ್ರಂಪ್ ಅವರ ಹತ್ಯೆಯ ಯತ್ನದಿಂದ ಆಘಾತವಾಗಿದೆ. ಇಂತಹ ಘಟನೆಗಳನ್ನು ಬಲವಾಗಿ ಖಂಡಿಸಬೇಕು’ ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಸೋಲು ಕಂಡು, ಬೈಡನ್ ಅವರಿಗೆ ಅಧಿಕಾರ ಬಿಟ್ಟುಕೊಟ್ಟಿದ್ದರು. ಹೀಗಿದ್ದರೂ ಡೊನಾಲ್ಡ್ ಟ್ರಂಪ್ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದು, ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ ಚುನಾವಣೆ ಸಂಬಂಧ ಪ್ರಚಾರ ಸಭೆಯನ್ನ ನಡೆಸುವ ವೇಳೆ ಗುಂಡಿನ ದಾಳಿ ಆಗಿದೆ. ಆದರೆ, ಅದೃಷ್ಟಕ್ಕೆ ಟ್ರಂಪ್ ಅವರ ಕಿವಿಗೆ ತಾಗಿದ ಆ ಗುಂಡು ಪಕ್ಕಕ್ಕೆ ಜಾರಿ ಹೋಗಿದೆ. ಹೀಗಾಗಿ, ಗುಂಡು ತಗುಲಿದ ಪರಿಣಾಮ ಟ್ರಂಪ್ ಕಿವಿ & ಮುಖದ ತುಂಬಾ ರಕ್ತ ಚಿಮ್ಮಿದೆ. ಆ ತಕ್ಷಣ ಭದ್ರತಾ ಸಿಬ್ಬಂದಿ ಓಡೋಡಿ ಬಂದಿದ್ದಾರೆ.
ಟ್ರಂಪ್ಗೆ ಗುಂಡು ಹಾರಿಸುವ ಸಮಯದಲ್ಲಿ ಗುಂಡಿನ ದಾಳಿಯಿಂದಾಗಿ ಸ್ಥಳದಲ್ಲಿದ್ದ ಒಬ್ಬ ವೀಕ್ಷಕ ಮೃತಪಟ್ಟಿದ್ದಾನೆ.