ರಾಜ್ಯದಲ್ಲಿ ಡೆಂಗ್ಯೂ ಹಾವಳಿ ನಡುವೆ ಇಲಿ ಜ್ವರ ಪತ್ತೆ: ಓರ್ವ ವ್ಯಕ್ತಿ ಸಾವು

Most read

ರಾಜ್ಯದಲ್ಲಿ ಡೆಂಗ್ಯೂ ಹಾವಳಿ ನಡುವೆ ಈಗ ಹಾವೇರಿ ಜಿಲ್ಲೆಯಲ್ಲಿ ಇಲಿ ಜ್ವರ ಪತ್ತೆಯಾಗಿದ್ದು, ಮೊದಲ ಸಾವು ವರದಿಯಾಗಿದೆ. ನಿನ್ನೆಯಷ್ಟೇ  12 ವರ್ಷದ ಬಾಲಕನಲ್ಲಿ ಇಲಿ ಜ್ವರ ಕಾಣಿಸಿಕೊಂಡಿದ್ದು ಪತ್ತೆಯಾಗಿತ್ತು. ಈಗ ಹಾವೇರಿ ಜಿಲ್ಲೆಯಲ್ಲಿ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದ ಉಮೇಶ್(72) ಎಂಬುವವರು ಇಲಿ ಜ್ವರಕ್ಕೆ ಬಲಿಯಾಗಿದ್ದಾರೆ.

ಕಳೆದ 15 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಉಮೇಶ್‌ ಅವರು ಹಾವೇರಿ, ಮಂಗಳೂರು ಸೇರಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇಲಿ ಜ್ವರದ ಜೊತೆ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ವೃದ್ಧ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 

ಇಲಿ ಜ್ವರ ಕಾಣಿಸಿಕೊಂಡ ಬಾಲಕನಿಗೆ ಕಳೆದ ಒಂದು ವಾರದಿಂದ ನಿರಂತರವಾಗಿ ಜ್ವರ ಕಾಣಿಸಿಕೊಂಡ ಹಿನ್ನಲೆ ಹಾವೇರಿ ಜಿಲ್ಲಾಸ್ಪತ್ರಗೆ ದಾಖಲಿಸಲಾಗಿದೆ. ಮೊದಲು 12 ವರ್ಷದ ಬಾಲಕನಿಗೆ ಜಾಂಡೀಸ್ ರೋಗ ಕಾಣಿಸಿಕೊಂಡಿತ್ತು. ರೋಗ ಗುಣಮುಖಗೊಂಡು ಊರಿಗೆ ಹೋಗಿದ್ದ. ಮತ್ತೆ ಬಾಲಕನಲ್ಲಿ ಜ್ವರ ಕಾಣಿಸಿಕೊಂಡ ಹಿನ್ನಲೆ ಜಿಲ್ಲಾಸ್ಪತ್ರೆಗೆ ದಾಖಲಿದ್ದಾರೆ. ಬಾಲಕನ ರಕ್ತಪರೀಕ್ಷೆಯ ನಂತರ ಬಾಲಕನಿಗೆ ಇಲಿ ಜ್ವರ ಪತ್ತೆಯಾಗಿದೆ. ಬಾಲಕ ಆರೋಗ್ಯ ಸ್ಥಿರವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಬಾಲಕನ ಆರೋಗ್ಯ ಸ್ಥಿರವಾಗಿದೆ. 

ಇಲಿ ಜ್ವರದ ಲಕ್ಷಣಗಳು:

ಇಲಿ ಜ್ವರದ ಕೆಲವು ಸಾಮಾನ್ಯ ಲಕ್ಷಣಗಳು ಕೆಲವರಲ್ಲಿ ಕಂಡು ಬಂದರೆ, ಕೆಲವರಿಗೆ ಯಾವುದೇ ರೋಗಲಕ್ಷಣಗಳಿಲ್ಲದಿರಬಹುದು. ಸಿಡಿಸಿ ಪ್ರಕಾರ, ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಲೆಪ್ಟೊಸ್ಪೈರೋಸಿಸ್ ಮೂತ್ರಪಿಂಡದ ಹಾನಿ, ಮೆನಿಂಜೈಟಿಸ್ (ಮೆದುಳು ಮತ್ತು ಬೆನ್ನುಹುರಿಯ ಸುತ್ತಲು ಉರಿಯೂತ), ಯಕೃತ್ತಿನ ವೈಫಲ್ಯ, ಉಸಿರಾಟದ ತೊಂದರೆ ಮತ್ತು ಸಾವಿಗೆ ಕಾರಣವಾಗಬಹುದು ಎಂದಿದೆ.

  • ವಾಕರಿಕೆ ಮತ್ತು ವಾಂತಿ
  • ಹೊಟ್ಟೆ ನೋವು
  • ಅತಿಸಾರ
  • ತಲೆನೋವು
  • ತುಂಬಾ ಜ್ವರ
  • ಕಾಮಾಲೆ
  • ಕೆಂಪು ಕಣ್ಣುಗಳು

More articles

Latest article