RCBಗೆ ಬ್ಯಾಟಿಂಗ್ ಕೋಚ್‌ ಮತ್ತು ಮೆಂಟರ್ ಆಗಿ ದಿನೇಶ್ ಕಾರ್ತಿಕ್ ನೇಮಕ

Most read

ಐಪಿಎಲ್ 2025ರ ಋತುವಿನಲ್ಲಿ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಆಡಲ್ಲ. ನಿವೃತ್ತಿಯಾಗಿದ್ದಾರೆ ಎಂದು ಬೇಸರಗೊಂಡಿದ್ದ ಅಭಿಮಾನಿಗಳಿಗೆ ಸಹಿಸುದ್ದಿ ಸಿಕ್ಕಿದೆ. ಹೌದು, ದಿನೇಶ್ ಕಾರ್ತಿಕ್ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಆದರೆ ಕೋಚ್ ಆಗಿ ಎಂದು ಆರ್‌ಸಿಬಿ ಫ್ರಾಂಚೈಸಿ ತಿಳಿಸಿದೆ.

ಐಪಿಎಲ್ 2024 ಸೀಸನ್‌ನಲ್ಲಿ ಆರ್‌ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದರು. ಈ ಪಂದ್ಯದ ನಂತರ ದಿನೇಶ್ ಕಾರ್ತಿಕ್ ಐಪಿಎಲ್‌ಗೆ ವಿದಾಯ ಹೇಳಿ ಕಣ್ಣೀರಿಡುತ್ತಾ ಹೊರಟು ಹೋಗಿದ್ದರು. ನಂತರ ಜೂನ್ 1 ರ ದಿನೇಶ್ ತಮ್ಮ ಜನ್ಮದಿನದಂದು ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಡಿಕೆ ಅಧಿಕೃತವಾಗಿ ವಿದಾಯ ಹೇಳಿದರು ಇದರಿಂದಾಗಿ ಫ್ಯಾನ್ಸ್‌ ಬೇಸರಗೊಂಡಿದ್ದರು.

ಶುಭ ಸುದ್ದಿ ಕೊಟ್ಟ ಆರ್‌ ಸಿ ಬಿ ಫ್ರಾಂಚೈಸಿ

“ನಮ್ಮ ಆರ್‌ಸಿಬಿ ತಂಡದ ವಿಕೆಟ್‌ಕೀಪರ್‌ಗೆ ಸುಸ್ವಾಗತ. ದಿನೇಶ್ ಕಾರ್ತಿಕ್ ಹೊಸ ಅವತಾರದೊಂದಿಗೆ ತಂಡಕ್ಕೆ ಮರಳಲಿದ್ದಾರೆ. RCB ಪುರುಷರ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ದಿನೇಶ್‌ ಕಾರ್ತಿಕ್‌ ಕಾರ್ಯ ನಿರ್ವಹಿಸಲಿದ್ದಾರೆ. ಅವರನ್ನು ಕ್ರಿಕೆಟ್ ನಿಂದ ಬೇರ್ಪಡಿಸಬಹುದು. ಆದರೆ ಕ್ರಿಕೆಟ್ ಅವರಿಂದ ದೂರವಾಗಲು ಸಾಧ್ಯವಿಲ್ಲ ಎಂದು ಆರ್‌ಸಿಬಿ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಹೇಳಿಕೊಂಡಿದೆ.

ಐಪಿಎಲ್ ಮೊದಲ ಸೀಸನ್‌ನಿಂದ ಇಲ್ಲಿವರೆಗೂ ಆಡಿರುವ ಕೆಲವೇ ಆಟಗಾರರಲ್ಲಿ ದಿನೇಶ್ ಕಾರ್ತಿಕ್ ಕೂಡ ಒಬ್ಬರು. ದಿನೇಶ್ ಕಾರ್ತಿಕ್ ಮೊದಲು ಡೆಲ್ಲಿ ಕ್ಯಾಪಿಟಲ್ಸ್‌ ನೊಂದಿಗೆ ಲೀಗ್‌ ಪ್ರಾರಂಭಿಸಿದರು. ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ತಂಡಗಳನ್ನು ಪ್ರತಿನಿಧಿಸಿದ್ದಾರೆ.

More articles

Latest article