ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ

Most read

ತೈಲ ಮಾರುಕಟ್ಟೆ ಕಂಪನಿಗಳು ಜುಲೈ 1ರಿಂದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ. ದೆಹಲಿಯಲ್ಲಿ 19KG ವಾಣಿಜ್ಯ ಸಿಲಿಂಡರ್ ಬೆಲೆ 31 ರೂ. ಇಳಿಕೆಯಾಗಿದೆ. ಹೊಸ ಬೆಲೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ಇಂಡಿಯನ್ ಆಯಿಲ್ ಅಥಾರಿಟಿ ಪ್ರಕಾರ, ಜುಲೈ 1ರಿಂದ ಕೋಲ್ಕತ್ತಾದಲ್ಲಿ 19KG ವಾಣಿಜ್ಯ ಗ್ಯಾಸ್ ಸಿಲಿಂಡರ್ 1,756 ರೂ.ಗೆ ಇಳಿಯಲಿದೆ. ಜೂನ್‌ನಲ್ಲಿ ದೆಹಲಿಯಲ್ಲಿ 19KG ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1,787 ರೂ.ಇತ್ತು. ಇದೀಗ 31 ರೂ. ಇಳಿಕೆಯಾಗಿದೆ. 14.2KG ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿ ಬದಲಾವಣೆಯಾಗಿಲ್ಲ.

ಕೋಲ್ಕತ್ತಾದಲ್ಲಿ ಸಬ್ಸಿಡಿ ರಹಿತ 14.2KG ಅಡುಗೆ ಅನಿಲಕ್ಕೆ 529 ಇದ್ದರೆ, ದೆಹಲಿಯಲ್ಲಿ 503 ರೂ ಇದೆ. ಮುಂಬೈನಲ್ಲಿ 5೦2.5 ಇದೆ, ಚೆನ್ನೈನಲ್ಲಿ 518.5 ರುಪಾಯಿ ಇದೆ. ಕರ್ನಾಟಕದಲ್ಲಿ 14.5KG ಗೃಹಬಳಕೆಯ ಸಿಲಿಂಡರ್ ಬೆಲೆ 905.5 ರೂ. ಇದ್ದರೆ, ವಾಣಿಜ್ಯ ಬಳಕೆಯ 14.5KGಯ ಸಿಲಿಂಡರ್ ಬೆಲೆ 1,813 ರೂ. ಇದೆ.

More articles

Latest article