ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಗೆದ್ದಿದ್ದೇ ಮುಸ್ಲಿಮರ ಮತಗಳಿಂದ ಎಂದು ಹೇಳಿ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಸಚಿವ ಜಮೀರ್ ಅಹ್ಮದ್ ಖಾನ್ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಜಮೀರ್ ಅವರನ್ನು ವಿಜಯನಗರ ಉಸ್ತುವಾರಿಯಿಂದ ಕಿತ್ತು ಬಳ್ಳಾರಿ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ವಸತಿ, ವಕ್ಸ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರು ಜಮೀರ್ ಅಹ್ಮದ್ ಖಾನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶಿಸಲಾಗಿದೆ.
ಈ ಹೇಳಿಕೆ ವಿವಾದವಾಗಿ ಬದಲಾದ ನಂತರ ಸ್ಪಷ್ಟನೆ ಕೊಟ್ಟ ಸಚಿವ ಜಮೀರ್, ಮುಸ್ಲಿಮರು ಒನ್ಸೈಡ್ ಮತ ಮಾಡಿದ್ದಾರೆ ಎಂದು ಹೇಳಿದ್ದೇನೆ. ಸಾಗರ್ ಖಂಡ್ರೆ 6 ಲಕ್ಷ ವೋಟ್ ಪಡೆದಿದ್ದಾರೆ. ಮುಸ್ಲಿಮರು 2 ಲಕ್ಷ ವೋಟ್ ನೀಡಿದ್ದಾರೆ. ಕೇವಲ 2 ಲಕ್ಷ ವೋಟ್ನಿಂದ ಗೆಲ್ಲಲು ಸಾಧ್ಯನಾ? ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ.