ಡಿ ಗ್ಯಾಂಗ್ ಇರುವ ಪೊಲೀಸ್ ಠಾಣೆ ಸುತ್ತ 144ನೇ ಸೆಕ್ಷನ್ ಜಾರಿ

Most read

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಚಿತ್ರನಟ ದರ್ಶನ್ ಮತ್ತು ಆತನ ಸಹಚರರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿರುವ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಮುಂದಿ ಐದು ದಿನಗಳ ಕಾಲ ಸಿಆರ್ ಪಿಸಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಾಗರಬಾವಿ ಬಳಿ ಇರುವ ಅನ್ನಪೂರ್ಣೇಶ್ವರಿ ನಗರ ಠಾಣೆಯ 200 ಮೀಟರ್ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಯಲ್ಲಿ ಇರಲಿದ್ದು, ಈ ಪ್ರದೇಶದಲ್ಲಿ ನಾಲ್ಕಕ್ಕೂ ಹೆಚ್ಚು ಮಂದಿ ಗುಂಪುಗೂಡಿ ನಿಲ್ಲುವುದೂ ಸೇರಿದಂತೆ ಹಲವು ಪ್ರತಿಬಂಧಗಳನ್ನು ಹೇರಲಾಗಿದೆ.

ದರ್ಶನ್ ಗ್ಯಾಂಗ್ ಇರಿಸಲಾಗಿರುವ ಠಾಣೆ ಬಳಿ ಆತನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡಬಹುದು ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ನಿನ್ನೆಯೂ ಸಹ ದರ್ಶನ್ ಅಭಿಮಾನಿಗಳು ಅಲ್ಲಿಗೆ ಬಂದು `ಡಿ ಬಾಸ್ ಡಿ ಬಾಸ್’ ಎಂದು ಕೂಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಅವರನ್ನು ಅಲ್ಲಿಂದ ಓಡಿಸಿದ್ದರು.

ಈ ನಡುವೆ ದರ್ಶನ್ & ಗ್ಯಾಂಗ್ ಇರಿಸಲಾಗಿರುವ ಅನ್ನಪೂರ್ಣೇಶ್ವರಿ ನಗರ ಠಾಣೆ ಸುತ್ತ ಶಾಮಿಯಾನ ಹಾಕಿ ಮುಚ್ಚಲಾಗಿದೆ. ಒಳಗೆ ಏನು ನಡೆಯುತ್ತದೆ ಎಂದು ಇಣುಕುವವರು ಸಂಖ್ಯೆ ಹೆಚ್ಚಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ದರ್ಶನ್ ಮತ್ತು ಸಂಗಡಿಗರಿಗೆ ಸಿಗರೇಟ್ ವ್ಯವಸ್ಥೆ ಮಾಡಿಕೊಡಲಾಗಿದೆ, ಇದಕ್ಕಾಗಿಯೇ ಶಾಮಿಯಾನದಿಂದ ಕವರ್ ಮಾಡಲಾಗಿದೆ ಎಂದು ಕೆಲವು ಮಾಧ್ಯಮಗಳು ಆರೋಪಿಸಿವೆ.

More articles

Latest article