ಶ್ರೀಕಾಂತ್ ಪೂಜಾರಿಯ ಮೇಲಿನ 30 ವರ್ಷದ ಹಿಂದಿನ ಕೇಸನ್ನು ರೀ ಓಪನ್ ಮಾಡಿರುವ ಸರ್ಕಾರಕ್ಕೆ ಹಿಂಪಡೆಯಲು ಸಲಹೆ ನೀಡಲು ಮಾಜಿ ಸಿಎಂ ಜಗದೀಶ ಶೆಟ್ಟರ್ ಮುಂದಾಗಿದ್ದಾರೆ.
1992 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ಬಾಬ್ರಿ ಮಸೀದಿ ಕುರಿತಾದ ಗಲಭೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ನಿವಾಸಿ ಶ್ರೀಕಾಂತ್ ಪೂಜಾರಿಯನ್ನು ಅರೆಸ್ಟ್ ಮಾಡಿದ ಬೆನ್ನಲ್ಲೆ, 30 ವರ್ಷದ ಹಿಂದಿನ ಕೇಸನ್ನು ಹಿಂಪಡೆಯಲು ಮಾಜಿ ಸಿಎಂ ಜಗದೀಶ ಶೆಟ್ಟರ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ನಾನು ಸಿಎಂ ಆಗಿದ್ದಾಗ ಅನೇಕ ಕೇಸಗಳನ್ನು ಹಿಂಪಡೆಯಲಾಗಿತ್ತು. ಬಿಜೆಪಿಯವರು ಬೇರೆ ಯಾರ ಮೇಲಿನ ಕೇಸ್ ಹಿಂಪಡೆಯಲಿಲ್ಲ. ಗೃಹ ಸಚಿವರಾಗಿದ್ದ ಆರ್ ಆಶೋಕ್ ಅವರು ಎಷ್ಟು ಕೇಸನ್ನು ಹಿಂಪಡೆದಿದ್ದಾರೆ ಲೆಕ್ಕ ಕೊಡಲಿ ಎಂದು ಹೇಳಿದ್ದಾರೆ.
ಆರ್ ಅಶೋಕ್ ಸಚಿವರಾಗಿದ್ದಾಗ ಕರಸೇವಕರು ನೆನಪಾಗಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಲಾಭ ಪಡೆಯಲು ನಕಲಿ ಪ್ರತಿಭಟನೆ ಮಾಡುತ್ತಿದ್ದಾರೆ ಮತ್ತು ಈ ಪ್ರತಿಭಟನೆಯ ಹಿಂದೆ ಪ್ರಲ್ಹಾದ್ ಜೋಶಿ ಕೈವಾಡವಿದೆ ಎಂದು ಆರೋಪ ಮಾಡಿದರು.