ಕಡಲೇಕಾಳು ಎಂದಾಕ್ಷಣಾ ಅದನ್ನ ನೆನೆಸಿ ಸಾಂಬಾರ್ ಅಥವಾ ಉಸಲಿ ಮಾಡ್ತೀವಿ. ಇದನ್ನು ಅಚ್ಚುಕಟ್ಟಾಗಿ, ರುಚಿ ರುಚಿಯಾಗಿ ಬಿರಿಯಾನಿಗೂ ಬಳಸಬಹುದು ಎಂಬುದು ನಿಮಗೆ ಗೊತ್ತಾ..? ಅದನ್ನ ಇವತ್ತು ತೋರಿಸ್ತೀವಿ ನೋಡಿ.
ಬೇಕಾಗುವ ಪದಾರ್ಥಗಳು:
ನೆನೆಸಿಟ್ಟ ಕಡಲೇಕಾಳು
ಎಣ್ಣೆ
ತುಪ್ಪ
ಪಲಾವ್ ಐಟಂ
ಈರುಳ್ಳಿ
ಟಮೋಟೋ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಹಸಿಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ಪುದೀನಾ
ಮೊಸರು
ಮಾಡುವ ವಿಧಾನ:
ಒಂದು ಕಪ್ ಆಗುವಷ್ಟು ಕಡಲೇಕಾಳನ್ನು ರಾತ್ರಿಯೆಲ್ಲಾ ನೆನೆಸಿ, ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ಸೋನಾಮಸೂರಿ ಅಕ್ಕಿಯನ್ನು ಸ್ವಲ್ಪ ಸಮಯ ನೆನೆಸಿಡಿ. ಬಳಿಕ ಕುಕ್ಕರ್ ಗೆ ಎರಡು ಟೇಬಲ್ ಸ್ಪೂನ್ ನಷ್ಟು ಎಣ್ಣೆ, ಒಂದು ಟೇಬಲ್ ಸ್ಪೂನ್ ನಷ್ಟು ತುಪ್ಪ ಹಾಕಿಕೊಂಡು ಅದಕ್ಕೆ ಮರಾಟಿ ಮೊಗ್ಗು, ಚಕ್ಕೆ, ಲವಂಗ, ಓಂ ಕಾಳು, ಕಸೂತಿ ಹಾಕಿಕೊಂಡು, ಅದರ ಜೊತೆಗೆ ಉದ್ದುದ್ದ ಕಟ್ ಮಾಡಿರುವಂತ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಕೊಂಚ ಪ್ರೈ ಆದಮೇಲೆ ಒಂದು ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ, ಕೊತ್ತಂಬರಿ, ಪುದೀನಾ ಹಾಕಿ ಪ್ರೈ ಮಾಡಿ. ಬಳಿಕ ಒಂದು ಟಮೋಟೋ ಕಟ್ ಮಾಡಿ ಹಾಕಿ. ಚೆನ್ನಾಗಿ ಫ್ರೈ ಮಾಡಿದ ಮೇಲೆ ಒಂದು ಸ್ಪೂನ್ ಅರಿಶಿನದ ಪುಡಿ, ಖಾರದ ಪುಡಿ, ಅರ್ಧ ಸ್ಪೂನ್ ಗರಂ ಮಸಾಲ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ಬಳಿಕ ಅದಕ್ಕೆ ಒಂದು ಅರ್ಧ ಕಪ್ ಮೊಸರನ್ನು ಹಾಕಿ ತಿರುವಿ. ಈಗ ಬೇಯಿಸಿದ ಕಡಲೇಕಾಳನ್ನು ಹಾಕಿ, ಉಪ್ಪನ್ನು ಹಾಕಿ, ಫ್ರೈ ಆಗುವ ತನಕ ಬಿಡಿ. ಎಲ್ಲಾ ಮಿಕ್ಸ್ ಆದಮೇಲೆ ಅಕ್ಕಿ ಅಳತೆಗೆ ತಕ್ಕಂತೆ ನೀರು ಹಾಕಿ. ಸ್ವಲ್ಪ ಕುದಿಯುವುದಕ್ಕೆ ಬಿಡಿ. ಕುದಿಯುತ್ತಿದ್ದಾಗ ಅಕ್ಕಿಯನ್ನು ಹಾಕಿ, ತಿರುವಿ, ಸ್ವಲ್ಪ ಕುದಿಸಿಕೊಂಡು, ಕುಕ್ಕರ್ ಮುಚ್ಚಿ. ವಿಷಲ್ ಬಿಟ್ಟ ಮೇಲೆ ತೆಗೆದು ನೋಡಿ, ಸವಿಯಿರಿ ಖಂಡಿತ ಬಿರಿಯಾನಿ ಟೇಸ್ಟ್ ಕೊಟ್ಟೆ ಕೊಡುತ್ತೆ. ಟ್ರೈ ಮಾಡಿದವರು ಕಮೆಂಟ್ ಮಾಡಿ.