SSLC ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆ ಪ್ರಥಮ, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ!

Most read

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಇಂದು 8.69 ಲಕ್ಷ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಅನ್ನು ಬಿಡುಗಡೆ ಮಾಡಿದೆ.

ಬೆಂಗಳೂರಿನ ಮಲ್ಲೇಶ್ವರಂ 6ನೇ ಅಡ್ಡರಸ್ತೆಯ ಕಚೇರಿಯಲ್ಲಿ ಫಲಿತಾಂಶ ಕುರಿತು ಸುದ್ದಿಗೋಷ್ಠಿ ನಡೆಸುವ ಮೂಲಕ ಫಲಿತಾಂಶ ಬಿಡುಗಡೆ ಮಾಡಿದೆ.

  • ಉಡುಪಿ‌ ಜಿಲ್ಲೆ ಪ್ರಥಮ ಸ್ಥಾನ – 94%
    • ದಕ್ಷಿಣ ಕನ್ನಡ ಜಿಲ್ಲೆಗೆ ಎರಡನೇ ಸ್ಥಾನ 92.12% .
    • ಶಿವಮೊಗ್ಗ ಜಿಲ್ಲೆಗೆ ಮೂರನೇ ಸ್ಥಾನ. 88.67%.
    • ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ, 50.59%
    • ಕೊಡಗು 88%,
    • ಉತ್ತರ ಕನ್ನಡ 86%.
    • ಹಾಸನ 86%
    • ಮೈಸೂರು 85%,
    • ಶಿರಸಿ 84%,
    • ಬೆಂಗಳೂರು ಗ್ರಾ.83%
    • ಚಿಕ್ಕಮಗಳೂರು 83%,
    • ವಿಜಯಪುರ 79%
    • ಬೆಂ.ದಕ್ಷಿಣ 79%,
    • ಬೆಂಗಳೂರು ಉತ್ತರ 77%

ಮೊಬೈಲ್‌ನಲ್ಲಿ ರಿಸಲ್ಟ್‌ ಚೆಕ್‌ ಮಾಡುವ ವಿಧಾನ
ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಕ್ರೋಮ್‌ ಅಪ್ಲಿಕೇಶನ್‌ಗೆ ಹೋಗಿ. ಸರ್ಚ್‌ ಬಾರ್‌ನಲ್ಲಿ https://karresults.nic.in ಎಂದು ಟೈಪಿಸಿ, ಎಂಟರ್‌ ಮಾಡಿ. ‘SSLC Exam 1 2024 Result’ ಗೆ ಸಂಬಂಧಿತ ಲಿಂಕ್ ಮೇಲೆ ಕ್ಲಿಕ್ ಮಾಡಿ. ತೆರೆದ ವೆಬ್‌ಪೇಜ್‌ನಲ್ಲಿ ನಿಮ್ಮ ರಿಜಿಸ್ಟರ್‌ / ರೋಲ್‌ ನಂಬರ್ ಟೈಪಿಸಿ. ನಂತರ ‘View’ ಎಂದಿರುವಲ್ಲಿ ಕ್ಲಿಕ್ ಮಾಡಿ. ರಿಸಲ್ಟ್‌ ಪ್ರದರ್ಶಿತವಾಗುತ್ತದೆ. ಚೆಕ್‌ ಮಾಡಿಕೊಳ್ಳಿ.

More articles

Latest article