ಕಲ್ಬುರ್ಗಿ: ಅಲೆಮಾರಿ ಸಮುದಾಯದ ಅಭಿವೃದ್ಧಿ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಮತ್ತು ಕಲಾವಿದರ ಮಾಶಾಸನ, ಇವೆಲ್ಲವನ್ನೂ ಜಾರಿಗೆ ತಂದಿದ್ದು ಕಾಂಗ್ರೆಸ್. ಇದೀಗ 5 ಗ್ಯಾರೆಂಟಿಗಳನ್ನು ನೀಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇನ್ನೂ 5 ಗ್ಯಾರೆಂಟಿಗಳನ್ನು ಜಾರಿಗೆ ತರುವ ಆಶ್ವಾಸನೆಯನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರು ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರರಾದ ಸಿ.ಎಸ್. ದ್ವಾರಕಾನಾಥ್ ಹೇಳಿದರು.
ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷರೂ ಆಗಿರುವ ಡಾ. ಸಿ.ಎಸ್ ದ್ವಾರಕಾನಾಥ್ ಕಲ್ಬುರ್ಗಿಯಲ್ಲಿರುವ ಅಲೆಮಾರಿ ಅಮುದಾಯಗಳ ಕಾಲೋನಿಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.
ಕಳೆದ ಮೂರ್ನಾಲ್ಕು ದಶಕಗಳಿಂದ ಅಲೆಮಾರಿ, ಬುಡಕಟ್ಟು ಸಮುದಾಯಗಳ ಜೀವನ ಸುಧಾರಣೆಗಾಗಿ ಕೆಲಸ ಮಾಡುತ್ತಾ ಬಂದಿರುವ ದ್ವಾರಕಾನಾಥ್ ಅವರು ಮತ್ತು ಕಾಂಗ್ರೆಸ್ ಪಕ್ಷದಿಂದ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎನ್ನುವುದನ್ನು ಮನದಟ್ಟು ಮಾಡಿ ಕಾಂಗ್ರೆಸ್ ಅಭ್ಯರ್ಥಿಗಳಿಗೇ ಮತ ಚಲಾಯಿಸುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಜಾರಿಗೊಳಿಸಿರುವ ಗ್ಯಾರೆಂಟಿಗಳು ಜನರ ಬದುಕು ಸುಧಾರಿಸಲು ಹೇಗೆ ಸಹಕಾರಿ ಆಗಿದೆ ಎನ್ನುವುದನ್ನು ಅವರು ವಿವರಿಸಿದರು.
ರಾಜಾಪುರ್ ಕಾಲೋನಿಯಲ್ಲಿ ಬುಡ್ಗಜಂಗಮ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.
‘ ಬುಡ್ಗ ಜಂಗಮ, ಬೇಡ ಜಂಗಮ ಮತ್ತು ಬೇಡುವ ಜಂಗಮ ನಡುವೆ ಇರುವ ಗೊಂದಲ ಗಳನ್ನು ಪರಿಹಾರಿಸಬೇಕಿದೆ. ಈ ಕಾರಣದಿಂದ ಸರ್ಕಾರದಿಂದ ಸವಲತ್ತುಗಳನ್ನು, ಮೀಸಲಾತಿ, ಅನುದಾನ, ಯಾವುದೂ ಸಿಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ಕಂದಾಯ ಸಚಿವ ರನ್ನು ಭೇಟಿ ಮಾಡಿ ಇವರ ಸಮಸ್ಯೆಗಳನ್ನು ಕುರಿತಂತೆ ಸಾರ್ವಜನಿಕ ವಿಚಾರಣೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಇವರ ಸಮಸ್ಯೆಗಳನ್ನು ಅಲ್ಲೇ ಪರಿಹರಿಸಲು ಪ್ರಯತ್ನಿಸಿದ್ದೇವೆ. ಚುನಾವಣೆ ನಂತರ ಈ ಸಾರ್ವಜನಿಕ ವಿಚಾರಣೆ ಜಾರಿಯಾಗಲಿದೆ’ ಎಂದರು.
ಇಲ್ಲಿ ಸುಮಾರು 600 ಜನರು ವಾಸವಿದ್ದಾರೆ. ಎಲ್ಲರೂ ಕಾಂಗ್ರೆಸ್ ನೀಡಿರುವ ಗ್ಯಾರೆಂಟಿಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಗೇ ತಮ್ಮ ಮತ ಎಂದರು.
ನಂತರ ರಾಮ್ ಗಢ್ ನಲ್ಲಿ ಆಶ್ರಯ ಕಾಲೋನಿಗೆ ಭೇಟಿ ನೀಡಿ ಕಾಂಗ್ರೆಸ್ ಸಾಧನೆ ಬಗ್ಗೆ ಅವರು ಮಾತನಾಡಿದರು. ಅಲೆಮಾರಿ ಸಮುದಾಯದ ಅಭಿವೃದ್ಧಿ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಮತ್ತು ಕಲಾವಿದರ ಮಾಶಾಸನ, ಇವೆಲ್ಲವನ್ನೂ ಜಾರಿಗೆ ತಂದಿದ್ದು ಕಾಂಗ್ರೆಸ್. ಇದೀಗ 5 ಗ್ಯಾರೆಂಟಿಗಳನ್ನು ನೀಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇನ್ನೂ 5 ಗ್ಯಾರೆಂಟಿಗಳನ್ನು ಜಾರಿಗೆ ತರುವ ಆಶ್ವಾಸನೆಯನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರು ನೀಡಿದ್ದಾರೆ ಎಂದು ಅವರು ಹೇಳಿದರು.
ನಂತರ ಬೀರಪ್ಪಬೆಟ್ಟಕ್ಕೆ ದ್ವಾರಕಾನಾಥ್ ಭೇಟಿ ನೀಡಿದರು. ಬೀರಪ್ಪಬೆಟ್ಟದಲ್ಲಿ ಒಡ್ಡರು, ಕೊರಮ, ಕೊರಚ, ಬುಡ್ಗ ಜಂಗಮ, ಹೆಳವ ಸಮುದಾಯಗಳವರು ವಾಸವಿದ್ದಾರೆ. ಇಲ್ಲಿ 360 ಮನೆಗಳಿವೆ. ಒಂದು ಮನೆಯಲ್ಲಿ 2 ಕುಟುಂಬಗಳ ವಾಸ. ಇಲ್ಲಿನ ಜನಸಂಖ್ಯೆ 2 ಸಾವಿರಕ್ಕೂ ಹೆಚ್ಚು. ಇವರು 25 ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ.
ಬಂಬೂ ಬಜಾರ್ ಸಮೀಪ ಇರುವ ಕಾಲೋನಿಯಲ್ಲಿ ಎಲ್ಲಿ ನೋಡಿದರಲ್ಲಿ ಹಳೆ ಬಟ್ಟೆ ಗಂಟುಗಳ ರಾಶಿ. ಮೂಲಭೂತ ಸೌಲಭ್ಯಗಳು ಯಾವುದೂ ಇಲ್ಲದ ಕಾಲೋನಿಯಲ್ಲಿ ಬುಡುಬುಡುಕಿ, ಜೋಷಿ, ಗೋಂದಳಿ ಸಮುದಾಯಗಳಿವೆ. 25 ಮನೆಗಳಿವೆ. ಈಗ ಇವರ ಕುಲವೃತ್ತಿ ಅನ್ನ ಕೊಡುತ್ತಿಲ್ಲ. ಹಳೆ ಬಟ್ಟೆಗಳನ್ನ ಕೊಂಡು ಒಗೆದು ಇಸ್ತ್ರಿ ಮಾಡಿ ಮಾರುತ್ತಾ ಜೀವನ ನಡೆಸ್ತಾರೆ. ಇವನ್ನು ಬಡವರು ಕೊಂಡುಕೊಳ್ತಾರೆ. ಇಲ್ಲಿಗೂ ಸಾಮಾಜಿಕ ನ್ಯಾಯ ವಿಭಾಗದ ತಂಡ ಭೇಟಿ ನೀಡಿ ಪರಿಶೀಲಿಸಿತು.
ಬ್ರಹ್ಮಪುರ್ ನಲ್ಲಿ ಗೋಂದಳಿ, ಜೋಷಿ ಸಮುದಾಯವನ್ನು ಉದ್ದೇಶಿಸಿ, ಕಾಂಗ್ರೆಸ್ ಸಾಧನೆಯ ಬಗ್ಗೆ ದ್ವಾರಕಾನಾಥ್ ಮಾತನಾಡಿದರು.
ತಾರ್ ಪಾಲ್ 8 ನೇ ಕ್ರಾಸ್ ದುರ್ಗಾ ಮುರ್ಗಿ ಮತ್ತು ಸಿಂದೋಳು ಸಮಾಜದವರು ವಾಸವಿದ್ದಾರೆ.
ಶಿವಲಿಂಗೇಶ್ವರ ಕಾಲೋನಿಯಲ್ಲಿ 200 ಮನೆಗಳಿವೆ. ಬುಡ್ಗ ಜಂಗಮ ಸಮಾಜದವರೆ ಹೆಚ್ಚಾಗಿ ವಾಸವಿದ್ದಾರೆ. ಇವರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸ ಎಷ್ಟು ಸ್ಪಷ್ಟ ಎಂದರೆ ಕಾಂಗ್ರೆಸ್ ಸದಾ ಅನ್ನದ ಬಗ್ಗೆ ಮಾತನಾಡುತ್ತೆ, ಸೂರಿನ ಬಗ್ಗೆ ಮಾತನಾಡುತ್ತೆ, ಶಿಕ್ಷಣ, ಆರೋಗ್ಯದ ಬಗ್ಗೆ ಮಾತಾಡುತ್ತದೆ. ಆದರೆ ಬಿಜೆಪಿ ಇವುಗಳ ಬಗ್ಗೆ ಎಂದೂ ಮಾತಾಡಿಲ್ಲ. ಅದು ಕೋಮು, ಹಿಂಸೆ ಕುರಿತು ಮಾತಾಡುತ್ತೆ, ಜಾತಿಯತೆ ಬಗ್ಗೆ ಮಾತಾಡುತ್ತೆ, ರಕ್ತಪಾತದ ಬಗ್ಗೆ
ಮಾತಾಡುತ್ತೆ, ಈ ಎರಡರ ನಡುವಿನ ವ್ಯತ್ಯಾಸ ನಿಮಗೆ ಗೊತ್ತಿದ್ದರೆ ನಿಮಗೆ ಆಯ್ಕೆ ಸುಲಭವಾಗುತ್ತದೆ ಎಂದರು.
ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಪಂಚ ಗ್ಯಾರೆಂಟಿಗಳನ್ನು ಕೊಟ್ಟು, ಜನಪ್ರಿಯವಾಗಿದೆ. ಅಂತೆಯೇ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಮತ್ತೆ ಐದು ಪಂಚ ಗ್ಯಾರೆಂಟಿಗಳನ್ನು ಕೊಡುವುದರೊಂದಿಗೆ ಎಲ್ಲಾ ನಿರ್ಗತಿಕ ಸಮುದಾಯಗಳ ಅಭಿವೃದ್ಧಿಗಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಖಂಡಿತ ಶ್ರಮವಹಿಸಲಿದ್ದಾರೆ’ ಎಂದರು.
ಕಾಂಗ್ರೆಸ್ ಗ್ಯಾರೆಂಟಿ ಬಗ್ಗೆ ಸಮುದಾಯಗಳಲ್ಲಿ ಸಂತಸವಿದೆ. ಈ ಗ್ಯಾರೆಂಟಿ ನಮ್ಮ ಬದುಕನ್ನು ಸುಧಾರಿಸಿದೆ ಎನ್ನುತ್ತಾರೆ. ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗಳಲ್ಲಿ ಭಾಗವಹಿಸಿದ್ದು ಗಮನಾರ್ಹ. ಅನ್ನ ತಿನ್ನುವ ಕೈಯನ್ನು, ಅನ್ನ ಕೊಟ್ಟ ಕೈ ಪಕ್ಷವನ್ನು ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾಗಿ ನುಡಿದರು. ಹೆಂಗಸರು ಕೈಮುಗಿದು ಧನ್ಯವಾದ ತೀಳಿಸಿದ್ದು ಹೃದಯಸ್ಪರ್ಶಿಯಾಗಿತ್ತು. ಅವರ ಮುಖದಲ್ಲಿ ನಗು ಅರಳಿತ್ತು.