ಬಾಗಲಕೋಟೆ: ಪ್ರಜ್ವಲ್ ಬರೀ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯಲ್ಲ, ಅತ್ಯಾಚಾರ ಆರೋಪಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂತ್ರಸ್ತರೊಬ್ಬರು ಅತ್ಯಾಚಾರ ಆಗಿದೆ ಎಂದು ಸುಳ್ಳು ಹೇಳ್ತಾರಾ? ಅವರ ಜೀವನ ಹಾಳಾಗಲ್ವಾ? ಮದುವೆಯಾದ ಹೆಣ್ಣಮಗಳು ಅತ್ಯಾಚಾರ ಆಗಿದೆ ಅಂದಾಗ ಅದನ್ನು ಒಪ್ಪಿಕೊಳ್ಳಬೇಕಾಗುತ್ತೆ. ಸಂತ್ರಸ್ತ ಹೆಣ್ಣು ಮಗಳು ಸುಳ್ಳು ಹೇಳಲ್ಲ ಎಂದರು.
ಇದೆಲ್ಲ ಗೊತ್ತಿದ್ದು ಯಾಕೆ ಅವನಿಗೆ ಟಿಕೆಟ್ ಕೊಟ್ಟರು. ಅದೆಲ್ಲಾ ಗೊತ್ತಿದ್ದು ಯಾಕೆ ಬಿಜೆಪಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡ್ರು ಎಂದು ಪ್ರಶ್ನಿಸಿದ ಸಿಎಂ, ಪ್ರಜ್ವಲ್ ರೇವಣ್ಣ ರಾಸಲೀಲೆ ಬಗ್ಗೆ ಮಿತ್ರ ಪಕ್ಷ ಬಿಜೆಪಿ ತುಟಿ ಬಿಚ್ಚುತ್ತಿಲ್ಲ. ಬಿಜೆಪಿಯವ್ರು ತಪ್ಪು ಮಾಡಿ ಬಿಟ್ಟಿದ್ದಾರೆ. ಯಾಕಂದ್ರೆ ಅದು ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋಗಳಿವೆ ಎಂದು ಮೊದಲೇ ಜೆಡಿಎಸ್ ಗೂ, ಬಿಜೆಪಿಗೂ ಗೊತ್ತಿತ್ತು ಅದಕ್ಕೆ ಯಾರೂ ಇದರ ಬಗ್ಗೆ ಮಾತನಾಡುತ್ತಿಲ್ಲ ಎಂದಿದ್ದಾರೆ.