ಚೆನ್ನೈ ಏರ್ ಶೋ ವೇಳೆ ಐವರು ಸಾವು, 230ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಕಾರಣವೇನು ಗೊತ್ತಾ?

Most read

ಭಾರತೀಯ ವಾಯುಪಡೆಯ 92 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆ ಹಿನ್ನೆಲೆ ಚೆನ್ನೈನ ಮರೀನಾ ಬೀಚ್‌ನಲ್ಲಿ ನಡೆದ ಏರ್ ಶೋ (ವೈಮಾನಿಕ ಪ್ರದರ್ಶನ) ವೇಳೆ ಬಿಸಿಲಿನತಾಪಕ್ಕೆ 5 ಮಂದಿ ಸಾವನಪ್ಪಿದ್ದು, 230ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ವಾಯುಪಡೆ ಸಂಸ್ಥಾಪನಾ ದಿನ ನಿಮಿತ್ತ ದಕ್ಷಿಣ ಭಾರತದಲ್ಲಿ ನಡೆದ ಮೊದಲ ಏರ್ ಶೋ ಇದಾಗಿತ್ತು. 72 ವಿಮಾನಗಳು ವಿವಿಧ ಸಾಹಸಗಳನ್ನು ಪ್ರದರ್ಶಿಸಿದ್ದವು. 15 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆಗೆ ಆಗಮಿಸಿದ್ದರು.

ಏರ್ ಶೋ ವೀಕ್ಷಿಸಿ ವಾಪಾಸ್ ತೆರಳುವಾಗ ಬಿಸಿಲಿನ ತಾಪಕ್ಕೆ ಜನರ ನಡುವೆ ನೂಕು ನುಗ್ಗಲು ಸಂಭವಿಸಿದೆ. ಈ ವೇಳೆ ಉಸಿರಾಡಲಾಗದೇ 230ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. 100 ಕ್ಕೂ ಹೆಚ್ಚು ಜನರಿಗೆ ಉಸಿರಾಟದ ಸಮಸ್ಯೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಮೃತರನ್ನು ಜಾನ್ (60), ತಿರುವೊಟ್ಟಿಯೂರು ಮೂಲದ ಕಾರ್ತಿಕೇಯನ್, ದಿನೇಶ್ ಕುಮಾರ್ (37), ಪೆರುಂಗಲತ್ತೂರಿನ ಶ್ರೀನಿವಾಸನ್, ಎಂದು ಗುರುತಿಸಲಾಗಿದೆ.

More articles

Latest article