ಕೇರಳ ಗುಡ್ಡ ಕುಸಿತದಲ್ಲಿ ಕರ್ನಾಟಕದ ನಾಲ್ವರ ಸಾವು, 9 ಮಂದಿ ನಾಪತ್ತೆ

ವಯನಾಡ್: ಕೇರಳ ಗುಡ್ಡ ಕುಸಿತದಲ್ಲಿ ಚಾಮರಾಜನಗರ ಮತ್ತು‌ ಮಂಡ್ಯ ಜಿಲ್ಲೆಯ ನಾಲ್ವರು ಜಲ ಸಮಾಧಿಯಾಗಿದ್ದಾರೆ. ರಾಜೇಂದ್ರ (50) ರತ್ನಮ್ಮ (45), ಪುಟ್ಟಸಿದ್ದಶೆಟ್ಟಿ (62), ರಾಣಿ (50) ಗುಡ್ಡ ಕುಸಿತದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.

ಈಗಾಗಲೇ ಮಣ್ಣಿನಡಿ ಹೂತುಹೋಗಿದ್ದ ಪುಟ್ಟಸಿದ್ದಶೆಟ್ಟಿ, ರಾಣಿ ಶವಗಳನ್ನು ರಕ್ಷಣಾಪಡೆ ಹೊರತೆಗೆದಿದೆ. ರಜನಿ (55), ರಾಜನ್ ಗಾಗಿ ಮುಂದುವರೆದ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಚಾಮರಾಜನಗರದ ಇರಸವಾಡಿಯ ರಾಜನ್, ರಜನಿ. ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬವರಿಗೆ ಗುಡ್ಡಕುಸಿತದಲ್ಲಿ ಗಾಯಗಳಾಗಿದ್ದು ಕಳೆದ 30 ವರ್ಷಗಳಿಂದ ಅವರು ಕೇರಳದ ಚೋರಲ್ಮಲದಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ.

ಮೃತರಲ್ಲಿ ಇಬ್ಬರು ಚಾಮರಾಜನಗರ, ಇಬ್ಬರು ಮಂಡ್ಯ ಜಿಲ್ಲೆಯವರು. ದುರಂತದ ಬಳಿಕ ರಾಜ್ಯದ 9 ಜನ ನಾಪತ್ತೆಯಾಗಿರುವ ಮಾಹಿತಿ ಇದೆ ಎಂದು ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ಮಾಹಿತಿ ನೀಡಿದ್ದಾರೆ.

More articles

Latest article

Most read