ಮದ್ರಸಾದಲ್ಲಿ ಪಾಠ ಕಲಿಯುತ್ತಿದ್ದ 16 ವರ್ಷದ ಯುವಕ 100ರೂಪಾಯಿ ವಾಚ್ ಕದ್ದಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಮೌಲ್ವಿ ಅರೆಬೆತ್ತಲೆಗೊಳಿಸಿ ಥಳಿಸಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.
ಹೌದು, ಸೂರತ್‌ನ ವಿದ್ಯಾರ್ಥಿ, ಔರಂಗಾಬಾದ್‌ನಲ್ಲಿರುವ ಜಾಮಿಯಾ ಬುರ್ಹಾನುಲ್ ಉಲೂಮ್ ಮದರಸಾದಲ್ಲಿ ಪಾಠ ಕಲಿಯುತ್ತಿದ್ದು, 16 ವರ್ಷದ ವಿದ್ಯಾರ್ಥಿ ಹತ್ತಿರದ ಅಂಗಡಿಯಿಂದ ಗಡಿಯಾರವನ್ನು ಕದ್ದಿದ್ದಾರೆ ಎಂದು ತಿಳಿದು ಬಂದುದೆ. ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದೆ. ಈ ಕುರಿತು ಹತ್ತಿರದ ಪೊಲೀಸದ್ ಠಾಣೆಗೆ ದೂರು ದಾಖಲಿದ ಅಂಗಡಿ ಮಾಲಿಕ. ನಂತರ ಕಳ್ಳತನ ಮಾಡಿದ ವಿದ್ಯಾರ್ಥಿಯ ಬಳಿ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳತನ ಮಾಡಿದ ವ್ಯಕ್ತಿಯನ್ನು ಮೌಲಾನಾ ಸೈಯದ್ ಉಮರ್ ಅಲಿ ಎಂದು ಗುರುತಿಸಲಾಗಿದೆ. ಮದ್ರಸಾದಲ್ಲಿ ಧರ್ಮಗುರು ಯುವ ವಿದ್ಯಾರ್ಥಿಗೆ “ಕ್ರೂರ ಶಿಕ್ಷೆಯನ್ನುಇ ವಿಧಿಸಿದ್ದು, ಅರೆಬೆತ್ತಲೆಗೊಳಿಸಿ ಮನಬಂದಂತೆ ಥಳಿಸಿದ್ದಾರೆ. ಇದಲ್ಲದೇ ತನ್ನ ಸಹಪಾಠಿಗರಿಂದಲು ಥಳಿಸುವಂತೆ ಹೇಳಿ ಆತನ ಮೇಲೆ ಸಾಮೂಹಿಕವಾಗಿ ಹಲ್ಲೆ ಮಾಡಲಾಗಿದೆ.
ಈ ಘಟನೆಯು ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ದೃಶ್ಯವಳಿಗಳು ಸಂತ್ರಸ್ತನ ಕುಟುಂಬಕ್ಕೂ ತಲುಪಿದೆ. ನಂತರ ಅವರ ಪೋಷಕರು ಸ್ಥಳೀಯ ಪೊಲೀಸರಿಗೆ ಮೌಲ್ವಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅಪ್ರಾಪ್ತ ವಿದ್ಯಾರ್ಥಿಗಳ ರಕ್ಷಣಾ ಕಾಯ್ದೆಯಡಿ (ಪೋಕ್ಸೋ) ಪ್ರಕರಣ ದಾಖಲಿಸಲಾಗಿದೆ.ದಾಳಿಯಲ್ಲಿ ಭಾಗಿಯಾಗಿದ್ದ ಉಳಿದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗಳಯೊಂದಿಗೆ ಈ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.