ಕೋಲಾರ: ಧರ್ಮಸ್ಥಳ ಗ್ರಾಮದಲ್ಲಿ ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಕೊಲೆಯಾಗಿ 13 ವರ್ಷಗಳು ಸಂದ ಹಿನ್ನಲೆಯಲ್ಲಿ ಇಂದು ರಾಜ್ಯಾದ್ಯಂತ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ‘ನ್ಯಾಯಕ್ಕಾಗಿ ಜನಾಗ್ರಹ ದಿನ’ ಎಂಬ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕೋಲಾರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ದಲಿತಪರ ಸಂಘಟನೆಗಳು, ಎಸ್ ಎಫ್ ಐ ಮೊದಲಾದ ಸಂಘಟನೆಗಳು ಪ್ರತಿಭಟನೆಗೆ ಕೈ ಜೋಡಿಸಿದ್ದವು. ನಚಿಕೇತನ ನಿಲಯದಿಂದ ಮೆಕ್ಕೆ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ನಂತರ ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆಯಲಾಯಿತು. ಸೌಜನ್ಯ ಹತ್ಯೆ ಕುರಿತು ಮರು ತನಿಖೆ ನಡೆಸಿ ಆರಫಿಗಳಿಗೆ ಶಿಕ್ಷೆ ವಿಧಿಸಬೇಕು. ಧೃಮಸ್ಥಳ ಗ್ರಾಮದಲ್ಲಿ ನಡೆದಿರುವ ಇತರ ಅಸಹಜ ಸಾವುಗಳು ಮತ್ತು ಭೂ ಅಕ್ರಮ ಮತ್ತು ಮೈಕ್ರೊ ಫೈನಾನ್ಸ್ ಅಕ್ರಮಗಳನ್ನುಕುರಿತು ತನಿಖೆ ನಡೆಸಬೇಕು ಎಂದೂ ಆಗ್ರಹಪಡಿಸಿದರು.
ನಂತರ ತಹಶೀಲ್ದಾರ್ ನಯನ ಅವರಿಗೆ ಮನವಿ ಸಲ್ಲಿಸಲಾಯಿತು. ಪಂಡಿತ್ ಮುನಿವೆಂಕಟಪ್ಪˌ ಜನವಾದಿ ಮಹಿಳಾ ಸಂಘಟನೆ ಗೀತಾ, ಗಮನ, ಅಂಧರಹಳ್ಳಿ ಶಾಂತಮ್ಮ, ಪ್ರಕ್ರಿಯ ಸಂಸ್ಥೆ ವೆಂಟಾಚಲಪತಿˌ ತೇಜಸ್ವಿ ವೇದಾಶ್ರಿ ಉಪಸ್ಥಿತರಿದ್ದರು.
ಹಕ್ಕೊತ್ತಾಯಗಳು:
1. ಸೌಜನ್ಯ ಅವರ ಕೊಲೆ ಪಾತಕರನ್ನು ಪತ್ತೆ ಹಚ್ಚಿ ಬಂಧಿಸಬೇಕು.
2. ವೇದವಲ್ಲಿ, ಪದ್ಮಲತಾ, ಯಮುನಾ, ಮಾವುತ ನಾರಾಯಣ ಕೊಲೆ ಪ್ರಕರಣಗಳ ಮರು ತನಿಖೆ ನಡೆಸಿ ನ್ಯಾಯ ಒದಗಿಸಬೇಕು.
3. ಧರ್ಮಸ್ಥಳದ ಅಸಹಜ ಸಾವುಗಳನ್ನು ಕುರಿತು ನ್ಯಾಯಯುತವಾಗಿ SIT ತನಿಖೆ ನಡೆಸಬೇಕು.
4. ಧರ್ಮಸ್ಥಳ ಭೂಹಗರಣ, ಮೈಕ್ರೊ ಫೈನಾನ್ಸ್ ಅಕ್ರಮಗಳನ್ನೂ ಕುರಿತು ಸಮಗ್ರ ತನಿಖೆ ನಡೆಸಬೇಕು.
5. ಪ್ರಸ್ತುತ ನಡೆಯುತ್ತಿರುವ ಎಸ್ಐಟಿ ವಿರುದ್ಧ ಷಡ್ಯಂತ್ರ ನಿಲ್ಲಬೇಕು.
6. ನೂರಾರು ಅಸಹಜ ಸಾವು-ಕೊಲೆ ನಡೆದ ಪ್ರದೇಶದ ಮಾಲೀಕರಿಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸಬೇಕು
7. ದೂರುದಾರರು, ಸಾಕ್ಷಿದಾರರು ಮತ್ತು ಹೋರಾಟಗಾರರ ಮೇಲಿನ ಪೊಲೀಸ್ ದೌರ್ಜನ್ಯ ನಿಲ್ಲಿಸಬೇಕು
8. ಸೌಜನ್ಯ ಅತ್ಯಾಚಾರದ ಸಾಕ್ಷ್ಯ ನಾಶ ಮಾಡಿದ ಅಧಿಕಾರಿಗಳನ್ನು ವಿಚಾರಣೆ ನಡೆಸಬೇಕು.
9. ಫೊರೆನ್ಸಿಕ್ ಸಾಕ್ಷ್ಯಗಳನ್ನು ರಕ್ಷಿಸದೆ ಪಿತೂರಿ ಮಾಡಿದ ವೈದ್ಯರು, ಪೊಲೀಸರನ್ನು ಶಿಕ್ಷೆಗೆ ಗುರಿಪಡಿಸಬೇಕು.
10. ಅತ್ಯಾಚಾರ-ಕೊಲೆ ಪ್ರಕರಣಗಳ ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹಿಸದೇ ಪ್ರಭಾವಿಗಳನ್ನು ರಕ್ಷಿಸಿದ ಪೊಲೀಸರನ್ನು ಬಂಧಿಸಬೇಕು.