ಇತ್ತಿಚೆಗೆ ನಟಿ ರಶ್ಮಿಕಾ ಮಂದಣ್ಣ ಪರೋಕ್ಷವಾಗಿ ಬಿಜೆಪಿಗೆ ವೋಟ್ ಮಾಡಿ ಎಂದು ಹೇಳುವುದರ ಜೊತೆಗೆ ಅಟಲ್ ಸೇತು ಅಭಿವೃದ್ಧಿ ಬಗ್ಗೆ ಹಾಡಿ ಹೊಗಳಿದ್ದರು. ಈ ವಿಚಾರವಾಗಿ ಇದೀಗ ಕೇರಳ ಕಾಂಗ್ರೆಸ್ ತಿರುಗೇಟು ನೀಡಿದೆ.
‘ಈವರೆಗೆ ಪಾವತಿಸಿದ ಜಾಹೀರಾತುಗಳು ಹಾಗೂ ಸಾರೋಗ್ರೇಟ್(ಬಾಡಿಗೆ) ಜಾಹೀರಾತುಗಳನ್ನು ಮಾತ್ರ ನೋಡುತ್ತಿದ್ದೆವು. ಆದರೆ ಇದೇ ಮೊದಲ ಬಾರಿಗೆ ಇಡಿ ನಿರ್ದೇಶನದ ಜಾಹೀರಾತನ್ನು ನೋಡುವಂತಾಗಿದೆ ಎಂದು ಕೇರಳ ಕಾಂಗ್ರೆಸ್ ರಶ್ಮಿಕಾ ಮಂದಣ್ಣ ಪೋಸ್ಟ್ ಬಗ್ಗೆ ವ್ಯಂಗ್ಯವಾಡಿದೆ. “ನೀವು ಹಂಚಿಕೊಂಡ ವೀಡಿಯೊದಲ್ಲಿ ಅಟಲ್ ಸೇತು ಖಾಲಿಯಾಗಿರುವುದನ್ನು ನಾವು ಗಮನಿಸಿದ್ದೇವೆ. ನಾವು ಕೇರಳದಿಂದ ಬಂದಿದ್ದರಿಂದ ಮುಂಬೈನಲ್ಲಿ ಟ್ರಾಫಿಕ್ ಕಡಿಮೆ ಎಂದು ಅನಿಸಿತು. ಬಳಿಕ ನಾವು ಮುಂಬೈ ಕಾಂಗ್ರೆಸ್ ಸ್ನೇಹಿತರಿಂದ ಅದೇ ಬಗ್ಗೆ ವಿಚಾರಿಸಲು ಪ್ರಯತ್ನಿಸಿದ್ದೇವೆ. ಅಟಲ್ ಸೇತುವಿಗೆ ಹೋಲಿಸಿದರೆ ರಾಜೀವ್ ಗಾಂಧಿ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕವನ್ನು ವಾಹನ ಚಾಲಕರು ಹೆಚ್ಚು ಬಳಸುತ್ತಾರೆ”
ಬೇಕಿದ್ದರೆ ಈ ವಿಡಿಯೋ ನೋಡಿ. ವೀಡಿಯೊ ಮಾತ್ರವಲ್ಲ, ನಾವು ಕೆಲವು ಡೇಟಾವನ್ನು ಸಹ ನೋಡಿದ್ದೇವೆ. 1,634 ಕೋಟಿ ವೆಚ್ಚದಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಮಿಸಿದ 5.6 ಕಿಮೀ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕವನ್ನು 2009 ರಲ್ಲಿ ಉದ್ಘಾಟಿಸಲಾಯಿತು. ಯಾವುದೇ ಶೋ ಆಫ್ ಇಲ್ಲದೇ ಆರಂಭವಾದ ಈ ಸಮುದ್ರದ ಮೇಲಿನ ಸೇತುವೆ ಮೂಲಕ ಹೆಚ್ಚು ಪ್ರಯಾಣಿಸಲು ವಾಹನ ಸವಾರರು ಆಸಕ್ತಿ ತೋರುತ್ತಿದ್ದಾರೆ. ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕಕ್ಕೆ ಪ್ರತಿ ಕಾರಿಗೆ ರೂ.85 ಮಾತ್ರ ವಿಧಿಸಲಾಗುತ್ತದೆ’ ಎಂದು ತಿರುಗೇಟು ನೀಡಿದೆ.