ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿದ್ದೇನೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ
ತನ್ನ ವೃತ್ತಿಜೀವನದ ನಿರ್ಣಾಯಕ ಹಂತದಲ್ಲಿ ಮೊಬೈಲ್ ಫೋನ್ ಮತ್ತು ಸಾಮಾಜಿಕ ಮಾಧ್ಯಮದಿಂದ ದೂರ ಉಳಿದಿರುವುದು ನನಗೆ ಆಟದಲ್ಲಿ ಹೆಚ್ಚು ಗಮನಹರಿಸಲು, ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಭಾರತದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಕೋಲ್ಕತ್ತಾದಲ್ಲಿ ನಡೆದ ಟಿ-20 ವಿಶ್ವಕಪ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಚೇಸ್ ಅನ್ನು ಪೂರ್ಣಗೊಳಿಸುವ ಬಗ್ಗೆ ಮತ್ತು ಆತ್ಮ ವಿಶ್ವಾಸ, ಮನಸ್ಥಿತಿ ಬದಲಾವಣೆಗಳ ಬಗ್ಗೆ ಮಾತನಾಡಿದರು.
“ಇದು ಸ್ವಲ್ಪ ಕಷ್ಟಕರವಾದ ಚೇಸಿಂಗ್ ಆಗಿತ್ತು. ನಮ್ಮ ಬ್ಯಾಟಿಂಗ್ ಶಕ್ತಿಯನ್ನು ನೋಡಿದಾಗ, ಈಡನ್ ಗಾರ್ಡನ್ಸ್ನಲ್ಲಿ ಇಬ್ಬನಿ ಬೀಳುವಾಗ 190 ರನ್ಗಳನ್ನು ಬೆನ್ನಟ್ಟುವುದು ಸ್ವಲ್ಪ ಸುಲಭವಾಗುತ್ತದೆ ಎಂದು ನನಗೆ ಅನಿಸಿತು, ಆದರೆ ನಿಯಮಿತ ಅಂತರದಲ್ಲಿ ನಮ್ಮ ತಂಡ ವಿಕೆಟ್ಗಳನ್ನು ಕಳೆದುಕೊಂಡಿದ್ದು ನನಗೆ ಸವಾಲಿನ ವಿಷಯವಾಗಿತ್ತು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅಲ್ಲಿಯೇ ನನ್ನ ಅನುಭವ ದೊಡ್ಡ ಪಾತ್ರವನ್ನು ವಹಿಸಿತು,ಇದು ಭಾರತವು ಟಿ -20 ವಿಶ್ವಕಪ್ನ ಸೆಮಿಫೈನಲ್ಗೆ ತಲುಪಲು ಸಹಾಯ ಮಾಡಿತು”
ಎಂದು ವೆಸ್ಟ್ ಇಂಡೀಸ್ ವಿರುದ್ಧದ ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ, ಪಂದ್ಯ ಗೆದ್ದುಕೊಟ್ಟ ತಮ್ಮ ಬ್ಯಾಟಿಂಗ್ ಅನ್ನು ನೆನಪಿಸಿಕೊಂಡರು.
“ನನಗೆ ಉತ್ತಮ ಆರಂಭ ಸಿಕ್ಕಿತು, ಆದರೆ ವಿಕೆಟ್ಗಳು ಬೀಳುತ್ತಲೇ ಇದ್ದಾಗ, ನಾನು ಆಕ್ರಮಣಕಾರಿ ಆಟವನ್ನು ಸ್ವಲ್ಪ ಮಟ್ಟಿಗೆ ನಿಲ್ಲಿಸಿ, ಕೊನೆಯ ಕ್ಷಣದವರೆಗೂ ಅದನ್ನು ಮುಂದುವರಿಸಬೇಕು ಎಂದು ನನಗೆ ಅನಿಸಿತು. ಸಾಮಾನ್ಯವಾಗಿ ಎಲ್ಲರೂ ಹಾಗೆಯೇ ಮಾಡಲು ಬಯಸುತ್ತಾರೆ, ಆದರೆ ಅದು ಎಲ್ಲಾ ಸಮಯದಲ್ಲೂ ಸಾಧ್ಯವಾಗುವುದಿಲ್ಲ, ಆದರೆ ಈ ಪಂದ್ಯದಲ್ಲಿ ನನಗೆ ಆ ತಂತ್ರಗಾರಿಕೆ ಸಾಧ್ಯವಾದ್ದರಿಂದ ನಾನು ತುಂಬಾ ಕೃತಜ್ಞನಾಗಿದ್ದೇನೆ”, ಎಂದರು
“ಜಿಯೋ ಹಾಟ್ಸ್ಟಾರ್”,ನ ‘ಹೈಯರ್ ಮ್ಯಾಚ್ ಸೆಂಟರ್ ಲೈವ್’ ನಲ್ಲಿ ಮಾತನಾಡುತ್ತಾ ಸಂಜು ಸ್ಯಾಮ್ಸನ್ ಹೇಳಿದರು

