ನವದೆಹಲಿ: ಆನ್‌ಲೈನ್‌ನಲ್ಲಿ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುವ ಜೊಮಾಟೊ ಕಂಪನಿಯು ತನ್ನ ಪ್ರತಿ ಆರ್ಡರ್ ಮೇಲೆ ವಿಧಿಸುವ ಶುಲ್ಕವನ್ನು (ಪ್ಲಾಟ್‌ಫಾರ್ಮ್ ಫೀ) ರೂ. 10 ಹೆಚ್ಚಳ ಮಾಡಿದೆ.
ಹಬ್ಬಗಳ ಸಂದರ್ಭದಲ್ಲಿ ಆರ್ಡರ್ ಗಳ ಸಂಖ್ಯೆ ಹೆಚ್ಚಿರುವುದರಿಂದ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಸಧ್ಯಕ್ಕೆ ದೆಹಲಿಯಲ್ಲಿ ಮಾತ್ರ ದರ ಹೆಚ್ಚಳ ಅನ್ವಯವಾಗುತ್ತದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.
ದೇಶದ ಎಲ್ಲ ನಗರಗಳಲ್ಲಿ ಶುಲ್ಕದ ದರ ಬದಲಾಗಲಿದೆ. ಆದರೆ ಯಾವ ನಗರದಲ್ಲಿ ಎಷ್ಟು ಶುಲ್ಕ ನಿಗದಿಯಾಗಲಿದೆ ಎಂದು ತಿಳಿದಿಲ್ಲ. ಕಳೆದ ಏಪ್ರಿಲ್ ತಿಂಗಳಿನಲ್ಲಿಯೂ ಜೊಮಾಟೊ ಆರ್ಡರ್ ಮೇಲೆ ವಿಧಿಸುವ ಶುಲ್ಕವನ್ನು 4 ರೂಪಾಯಿ ಹೆಚ್ಚಳ ಮಾಡಿತ್ತು. ಈಗ ಮತ್ತೆ ದರ ಏರಿಸಿದೆ.